ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯ

Update: 2017-11-23 15:47 GMT

ಉಡುಪಿ, ನ.23: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿ ಜನಾಂಗದ ಕೊರಗ, ಮಲೆಕುಡಿ ಉಪಜಾತಿಯವರು ಈ ಕೆಳಗೆ ಕಾಣಿಸಿದ ಉದ್ದೇಶಕ್ಕೆ ಸೌಲಭ್ಯ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.

1.ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳ ಸ್ಥಾಪನೆ, 2.ಹಣ್ಣು ಮತ್ತು ತರಕಾರಿಯ ಸಾಗಾಣಿಕೆಗೆ ಅಲ್ಪಅಶ್ವಶಕ್ತಿಯುಳ್ಳ ಸಾರಿಗೆ ವಾಹನ ಖರೀದಿ, 3. ಪವರ್ ಟಿಲ್ಲರ್, ಮಿನಿ ಟ್ರಾಕ್ಟರ್, ಹಾರ್ವೆಸ್ಟಿಂಗ್ ಮಿಷನ್, ಸಿಡ್ ಡಿಕೋರ್ಟಿ ಕೇಡರ್ಸ್‌ ಖರೀದಿ ಮತ್ತು ತೋಟಗಾರಿಕೆ ನರ್ಸರಿ ಸ್ಥಾಪನೆ, 4. ಕೋಳಿ ಮಾರಾಟ ಮಳಿಗೆ ಸ್ಥಾಪನೆ, 5.ಕೋಳಿ ಉತ್ಪಾದನಾ ಘಟಕ ಅಭಿವೃದ್ಧಿ ಕಾರ್ಯ, 6. ಮೀನು ಮಾರಾಟ ಮಳಿಗೆ ಸ್ಥಾಪನೆ, 7.ಮೀನು ಸಾಗಾಣಿಕೆಗಾಗಿ ಶೀತಲ ಪೆಟ್ಟಿಗೆ ಅಳವಡಿಸಿದ ದ್ವಿಚಕ್ರ ವಾಹನ ಖರೀದಿ, 8.ಹಣ್ಣು ಮತ್ತು ತರಕಾರಿ ಸಂರಕ್ಷಣೆಗೆ ಶೀತಲ ಪೆಟ್ಟಿಗೆ ಖರೀದಿ ಮುಂತಾದ ಉದ್ದೇಶಕ್ಕೆ ಕನಿಷ್ಟ 60 ಸಾವಿರ ರೂ.ನಿಂದ ಐದು ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.

ಆಸಕ್ತರು ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 0820-2574884ಗೆ ಕರೆ ಮಾಡುವಂತೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.5 ಕೊನೆಯ ದಿನವಾಗಿರುತ್ತದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News