ಹನೂರು: ಮೂಲ ಸೌಕರ್ಯವೇ ಇಲ್ಲದ ಮಹದೇಶ್ವರ ಸರಕಾರಿ ಅನುದಾನಿತ ಶಾಲೆ

Update: 2017-11-23 18:35 GMT

ಹನೂರು, ನ. 23: ತಾಲೂಕಿನ ಕೌದಳ್ಳಿ ಗ್ರಾಮದ ಸುಮಾರು 60 ವರ್ಷ ಇತಿಹಾಸ ಇರುವ ಮಹದೇಶ್ವರ ಸರಕಾರಿ ಅನುದಾನಿತ ಶಾಲೆಗೆ ಆವರಣಗೋಡೆ ನಿರ್ಮಿಸುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

   
1963ರಲ್ಲಿ ಆರಂಭಗೂಂಡ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಈ ಶಾಲೆ ಕೂಳ್ಳೇ ಗಾಲ ಮತ್ತು ಮಲೈಮಹದೇಶ್ವರ ಬೆಟ್ಟದ ಮುಖ್ಯ ರಸ್ತೆ ಬದಿಯಲ್ಲಿದೆ.ಮಲೈಮಹದೇಶ್ವರ ಬೆಟ್ಟದ ಜಾತ್ರೆ ಸಂದರ್ಭ ಇಲ್ಲಿಗೆ ಬರುವ ಪಾದಯಾತ್ರಿಗಳು ಉಳಿದುಕೊಳ್ಳಲು ಈ ಶಾಲೆಯ ಮೈದಾನ ಬಳಸಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಪಾಠ ಪ್ರವಚನಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಾಠ-ಪ್ರವಚನಕ್ಕೆ ತೊಂದರೆ:ಈ ಶಾಲೆಗೆ ಆವರಣಗೋಡೆ ಇಲ್ಲದೇ ಇರುವುದರಿಂದ ಸಾರ್ವಜನಿಕರು ಶಾಲಾ ಆವರಣಪ್ರವೇಶಿಸುತ್ತಿದ್ದಾರೆ. ಇದರಿಂದ ಮಕ್ಕಳ ಪಾಠ-ಪ್ರವಚನಗಳಿಗೆ ತೀವ್ರ ತೊಂದರೆ ಉಂಟಾ ಗುತ್ತಿದೆ. ರಜಾ ಸಮಯದಲ್ಲಿ ಶಾಲೆ ಮೈದಾನದಲ್ಲಿ ಅನೈತಿಕ ಚಟುವಟಿಕೆ ಹಾಗೂ ಜೂಜು ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಶಾಲೆಯಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟರ, ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣಪಡೆಯುತ್ತಿದ್ದಾರೆ. ಸಮರ್ಪಕ ಸೌಲಭ್ಯ ಇಲ್ಲದೇ ಇದ್ದರೆ ಈ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ಹನೂರು, ರಾಮಾಪುರ ಕೂಳ್ಳೇಗಾಲತೆರಳಬೇಕಾಗುತ್ತದೆ. ಇದೇ ಕಾರಣಕ್ಕೆ ಎಷ್ಟೋ ಹೆಣ್ಣು ಮಕ್ಕಳು ವಿದ್ಯಾಬ್ಯಾಸ ಅರ್ದಕ್ಕೆ ಮೋಟಕುಗೂಳಿಸುತ್ತಿದ್ದಾರೆ.

-ನೂರುಲ್ಲಾ, ಎಸ್.ಡಿ.ಪಿ.ಐ ಅದ್ಯಕ್ಷ

  ಕುಡಿಯುವ ನೀರಿನ ಸಮಸ್ಯೆ
ಈ ಶಾಲೆ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತ್ ಅನ್ನು ಅವಲಂಬಿಸಿದೆ. ಆದರೆ, ಕುಡಿಯುವ ನೀರು ಪೂರೈಕೆಯಲ್ಲಿ ಗ್ರಾ.ಪಂ. ಅಧಿಕಾರಿಗಳು ವಿಫಲರಾಗಿದ್ದು, ಶಾಲೆಗೆ ಸುಸಜ್ಜಿತ ಆವರಣ ಗೋಡೆ ನಿರ್ಮಿಸಲು ಹಾಗೂ ಶಾಲೆ ಅಭಿವೃದ್ಧಿ ಬಗ್ಗೆ ಗಮನ ಹರಿಸಲು ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡರಲ್ಲಿ ಹಲವು ಬಾರಿ ವಿನಂತಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News