ಗುಜರಾತ್ ಚುನಾವಣೆ ಬಳಿಕ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ

Update: 2017-11-24 06:20 GMT

ಹೊಸದಿಲ್ಲಿ, ನ.24: ಸಂಸತ್ತಿನ ಚಳಿಗಾಲದ ಅಧಿವೇಶವನ್ನು ಡಿ.15 ರಿಂದ ಜ.5ರ ತನಕ ನಡೆಸಲು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಶುಕ್ರವಾರ ನಿರ್ಧಾರ ಕೈಗೊಂಡಿದೆ.

‘‘ಗುಜರಾತ್ ವಿಧಾನಸಭಾ ಚುನಾವಣೆ ಕೊನೆಗೊಂಡ ಮರುದಿನವೇ 14 ದಿನಗಳ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಡಿ.24 ಹಾಗೂ 25 ರಂದು ಸದನ ನಡೆಯುವುದಿಲ್ಲ’’ ಎಂದು ಸಂಸದೀಯ ವ್ಯವಹಾರ ಸಚಿವ ಅನಂತ್‌ಕುಮಾರ್ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತನ್ನ ಭ್ರಷ್ಟಾಚಾರ ಹಾಗೂ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳುವ ಉದ್ದೇಶದಿಂದ ಸಂಸತ್ ಅಧಿವೇಶನವನ್ನು ಮುಂದೂಡಲು ಯೋಚಿಸುತ್ತಿದೆ. 2012ರಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆ ನಡೆದಾಗ ಚಳಿಗಾಲದ ಅಧಿವೇಶವನ್ನು ಯುಪಿಎ ಸರಕಾರ ಸರಿಯಾದ ಸಮಯಕ್ಕೆ ನಡೆಸಿತ್ತು ಎಂದು ಇತ್ತೀಚೆಗೆ ಕಾರ್ಯಕಾರಿ ಸಭೆಯ ವೇಳೆ ವಿಪಕ್ಷ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News