ಅಡ್ವಾಣಿ ಸೆಮಿಫೈನಲ್‌ಗೆ

Update: 2017-11-26 18:32 GMT

ದೋಹಾ , ನ.26: ಪಂಕಜ್ ಅಡ್ವಾಣಿ ಅವರು ಇಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ನೋಕರ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಅಡ್ವಾಣಿ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಲುವೊ ಹಾಂಗೊವ್ ವಿರುದ್ಧ 3-2 ಫ್ರೇಮ್‌ಗಳಿಂದ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಅಡ್ವಾಣಿ ಪದಕ ದೃಢಪಡಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ಅಡ್ವಾಣಿ ಅವರು ಅಸ್ಟ್ರೀಯದ ಫ್ಲೋರಿಯನ್ ನುಬ್ಲೆ ಅವರನ್ನು ಎದುರಿಸಲಿದ್ದಾರೆ.

ಬಿಲಿಯರ್ಡ್ಸ್‌ನಲ್ಲಿ 17 ಬಾರಿ ವಿಶ್ವ ಚಾಂಪಿಯನ್ ಜಯಿಸಿರುವ ಅಡ್ವಾಣಿ ಅವರು ಇತ್ತೀಚೆಗೆ ಲಾಂಗ್ ಫಾರ್ಮೆಟ್‌ನಲ್ಲಿ ಕಂಚು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News