ಆ್ಯಶಸ್ ಮೊದಲ ಟೆಸ್ಟ್: ಆಸ್ಟ್ರೇಲಿಯಕ್ಕೆ ಭರ್ಜರಿ ಜಯ

Update: 2017-11-27 07:14 GMT

 ಬ್ರಿಸ್ಬೇನ್, ನ.27: ಆ್ಯಶಸ್ ಸರಣಿಯ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ತಂಡ ಭರ್ಜರಿ ಗೆಲುವು ದಾಖಲಿಸಿದೆ

  ಬ್ರಿಸ್ಬೇನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾಗಿರುವ ಸೋಮವಾರ ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್ ನಲ್ಲಿ 50 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 173 ರನ್ ಗಳಿಸುವ ಮೂಲಕ 10 ವಿಕೆಟ್‌ಗಳ ಜಯ ಗಿಳಿಸಿದೆ.

 ರವಿವಾರ ದಿನದಾಟ ನಿಂತಾಗ ಆಸ್ಟ್ರೇಲಿಯ ಎರಡನೇ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿ ಗೆಲುವಿನ ಸಮೀಪಕ್ಕೆ ತಲುಪಿತ್ತು.

 ಆಸ್ಟ್ರೇಲಿಯ ತಂಡದ ಆರಂಭಿಕ ದಾಂಡಿಗರಾದ ಕ್ಯಾಮರೊನ್ ಬ್ಯಾಂಕ್ರಾಫ್ಟ್ 51 ರನ್(119ಎ, 5ಬೌ,1ಸಿ) ಮತ್ತು ಡೇವಿಡ್ ವಾರ್ನರ್ 60 ರನ್(86ಎ, 8ಬೌ) ಗಳಿಸಿ ಕ್ರೀಸ್‌ನಲ್ಲಿದ್ದರು. ಇಂದು ಇವರು ಬ್ಯಾಟಿಂಗ್ ಮುಂದುವರಿಸಿ ಮುರಿಯದ ಜೊತೆಯಾಟದಲ್ಲಿ 173 ರನ್ ಸೇರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಬ್ಯಾಂಕ್ರಾಫ್ಟ್ ಔಟಾಗದೆ 82 ರನ್(182ಎ, 10ಬೌ,1ಸಿ) ಮತ್ತು ವಾರ್ನರ್ ಔಟಾಗದೆ 87 ರನ್ (119ಎ, 10ಬೌ) ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News