ತಮಿಳುನಾಡಿನಲ್ಲಿ 33 ಕಡೆಗಳಲ್ಲಿ ಐಟಿ ದಾಳಿ

Update: 2017-11-28 10:48 GMT

ಹೊಸದಿಲ್ಲಿ,ನ.28: ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ತಮಿಳುನಾಡಿನಾದ್ಯಂತ 33 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು ಇವುಗಳಲ್ಲಿ 21 ದಾಳಿಗಳು ಚೆನ್ನೈ ನಗರವೊಂದರಲ್ಲಿಯೇ ನಡೆದಿವೆ. ಸ್ಪೆಕ್ಟ್ರಂ ಮಾಲ್ ಮಾಲಕರು, ಪಟೇಲ್ ಗ್ರೂಪ್, ಮಾರ್ಗ್ ಗ್ರೂಪ್, ಮಿಲನ್ ಗ್ರೂಪ್ ಹಾಗೂ ಗಂಗಾ ಫೌಂಡೇಶನ್ಸ್ ಗ್ರೂಪ್ ಕಚೇರಿಗಳ ಮೇಲೆ ದಾಳಿ ನಡದಿವೆ. ಶಶಿಕಲಾ ಮತ್ತವರ ಸಂಗಡಿಗರಿಗೆ ನಂಟು ಹೊಂದಿರುವ ಸಂಸ್ಥೆಗಳೇ ಇಂದು ದಾಳಿಗೊಳಗಾಗಿವೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ  ಎಐಎಡಿಎಂಕೆ ನಾಯಕಿ ಶಶಿಕಲಾ ಅವರ ಸಂಬಂಧಿಗಳಿಗೆ ಸೇರಿದ ಕನಿಷ್ಠ 187 ಸ್ಥಳಗಳಲ್ಲಿ ಐಟಿ ಆದೀಕಾರಿಗಳು ಶೋಧ ಕಾರ್ಯ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರ ಮುಂದುವರಿದ ಭಾಗವಾಗಿಯೇ ಇಂದಿನ ದಾಳಿಗಳು ನಡೆದಿವೆಯೆನ್ನಲಾಗಿದೆ. ಕಳೆದ ಬಾರಿಯ ದಾಳಿಗಳಲ್ಲಿ  ಅಂದಾಜು ರೂ. 1,430 ಮೌಲ್ಯದ ಅಕ್ರಮ ಆದಾಯಕ್ಕೆ ಸಂಬಂಧಿಸಿದ  ದಾಖಲೆಗಳು ಹಾಗೂ ಅಕ್ರಮ ನಗದು ಹಾಗೂ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. 

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಪೋಯೆಸ್ ಗಾರ್ಡನ್ ನಿವಾಸದ ಮೇಲೂ ಐಟಿ ದಾಳಿ ನಡೆದರೂ ಜಯಲಲಿತಾ ಅವರ ಸಹವರ್ತಿ ಪೂಂಗುಂಡ್ರನ್ ಅವರ ಕೊಠಡಿಗೆ ಮಾತ್ರ ಶೋಧ ಸೀಮಿತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News