ಐಎಫ್‌ಎಫ್‌ಐನಲ್ಲಿ ಎಸ್ ದುರ್ಗಾ ಸಿನೆಮಾ ಪ್ರದರ್ಶನವಿಲ್ಲ

Update: 2017-11-28 13:59 GMT

 ಹೊಸದಿಲ್ಲಿ, ನ.28: ಸನಾಲ್ ಕುಮಾರ್ ಶಶಿಧರನ್ ಅವರ ಸಿನೆಮಾ ‘ಎಸ್.ದುರ್ಗಾ’ವನ್ನು ಸೆನ್ಸಾರ್ ಪರಿಶೀಲನೆಗೆ ಮರಳಿ ಸಲ್ಲಿಸುವಂತೆ ಸೆನ್ಸಾರ್ ಮಂಡಳಿ ತಿಳಿಸಿರುವ ಕಾರಣ, ಗೋವಾದಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಪ್ರದರ್ಶನ ಮಾಡಲಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

   ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಂಗಳವಾರ ಮುಕ್ತಾಯವಾಗಿದೆ. ಈ ಮೊದಲು ಸಿನೆಮಕ್ಕೆ ‘ಸೆಕ್ಸಿ ದುರ್ಗಾ’ ಎಂದು ಹೆಸರಿಡಲಾಗಿತ್ತು. ಆದರೆ ಈ ಪದಕ್ಕೆ ಸೆನ್ಸಾರ್ ಆಕ್ಷೇಪ ಸೂಚಿಸಿದ ಬಳಿಕ ಸೆಕ್ಸಿ ಪದವನ್ನು ಕೈಬಿಡಲಾಗಿತ್ತು. ಆದರೆ ಸಿನೆಮದ ಹ್ಯಾಶ್‌ಟ್ಯಾಗ್‌ನಲ್ಲಿ ‘ಎಸ್’ ಎಂಬ ಶಬ್ದ ಸೇರಿಸಲಾಗಿದೆ. ಇದು ಸಿನೆಮಟೋಗ್ರಾಫ್ ಕಾಯ್ದೆ 1952,ರ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದ ಸೆನ್ಸಾರ್ ಮಂಡಳಿ ಇದಕ್ಕೆ ಆಕ್ಷೇಪ ಸೂಚಿಸಿದ್ದು, ಸಿನೆಮವನ್ನು ಮತ್ತೊಮ್ಮೆ ಸೆನ್ಸಾರ್ ಮಂಡಳಿಗೆ ಸಲ್ಲಿಸುವಂತೆ ಸಿನೆಮದ ನಿರ್ಮಾಪಕ ಶಾಜಿ ಮ್ಯಾಥ್ಯೂರವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

 ಗೋವಾ ಐಎಫ್‌ಎಫ್‌ಐ ತೀರ್ಪುಗಾರರ ಮಂಡಳಿ ಸಿನೆಮದ ಶೀರ್ಷಿಕೆಯ ಬಗ್ಗೆ ದೂರು ನೀಡಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಮೊದಲು ಯು/ಎ ಪ್ರಮಾಣಪತ್ರ ಪಡೆದಿದ್ದ ‘ಎಸ್.ದುರ್ಗ’ ಸಿನೆಮವನ್ನು ಐಎಫ್‌ಎಫ್‌ಐನಲ್ಲಿ ಪ್ರದರ್ಶಿಸಬೇಕೆಂದು ನ್ಯಾಯಾಲಯ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News