ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನ

Update: 2017-11-28 14:24 GMT

ಬೆಂಗಳೂರು, ನ. 28: ಕರ್ನಾಟಕ ನಾಟಕ ಅಕಾಡಮಿಯು ವಿಶೇಷ ಘಟಕ ಯೋಜನೆಯಡಿ 15 ಜನ ಪರಿಶಿಷ್ಟ ಜಾತಿ ಹಾಗೂ 30 ಜನ ಪರಿಶಿಷ್ಟ ಪಂಗಡಗಳ ಕಲಾವಿದರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧ ರಚಿಸಲು ಫೆಲೋಶಿಪ್ ನೀಡುತ್ತಿದೆ. ಪ್ರತೀ ಫೆಲೋಶಿಪ್ 1 ಲಕ್ಷ ರೂ. ಸಂಭಾವನೆ ಒಳಗೊಂಡಿದೆ.
ಆಸಕ್ತರು ಪ್ರಬಂಧಗಳ ವಿಷಯ ಹಾಗೂ ಸ್ವವಿವರಗಳೊಂದಿಗೆ ಡಿಸೆಂಬರ್ 7 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಬಿ.ಮಂಜುನಾಥ ಆರಾಧ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಳಾಸ: ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News