ವಿದ್ಯಾರ್ಥಿನಿಯರಿಗೆ ಶೌಚಾಲಯ ಸ್ವಚ್ಛಗೊಳಿಸಲು ಸೂಚಿಸಿದ ಶಿಕ್ಷಕ

Update: 2017-11-28 17:45 GMT

ಚೆನ್ನೈ, ನ.28: ಸರಕಾರಿ ಹೈಸ್ಕೂಲ್‌ನ ವಿದ್ಯಾರ್ಥಿನಿಯರಿಗೆ ಶಿಕ್ಷಕರೋರ್ವರು ಶೌಚಾಲಯ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ ಎನ್ನಲಾಗಿದ್ದು ಘಟನೆಯ ಕುರಿತು ತನಿಖೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

  ತಿರುವಲ್ಲೂರಿನಲ್ಲಿರುವ ಆರ್.ಎಂ. ಜೈನ್ ಸರಕಾರಿ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಕೆಲವು ತಮಿಳು ಟಿವಿ ಚಾನೆಲ್‌ಗಳಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಬಾಲಕಿಯೋರ್ವಳು ಅಳುತ್ತಾ, ಬಟ್ಟೆಯ ತುಂಡಿನಿಂದ ಶೌಚಾಲಯದ ನೆಲ ಒರೆಸುತ್ತಿರುವ ದೃಶ್ಯ ಪ್ರಸಾರವಾಗಿದೆ . ಸ್ವಲ್ಪ ನೀರು ತರುವಂತೆ ಇನ್ನೊಬ್ಬ ವಿದ್ಯಾರ್ಥಿನಿಗೆ ಆಕೆ ಹೇಳಿದ್ದು ಆಕೆ ನೀರು ತಂದು ಶೌಚಾಲಯದ ನೆಲಕ್ಕೆ ಸುರಿಯುತ್ತಿರುವ ದೃಶ್ಯವೂ ಪ್ರಸಾರವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು ಉನ್ನತಾಧಿಕಾರಿಗಳಿಗೆ ವರದಿ ಮಾಡಿದ್ದೇವೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News