ಅರ್ಥವಿಲ್ಲದ ಚರ್ಚಾ ಕಾರ್ಯಕ್ರಮಗಳು

Update: 2017-12-04 18:50 GMT

ಮಾನ್ಯರೆ,

ಡಿಬೆಟ್ ಶೋ ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ ತಂದು ಕೊಡುವ ನಂ.1 ಕಾರ್ಯಕ್ರಮ. ಆದರೆ ಇವತ್ತು ನಾವು ನೋಡುತ್ತಿರುವ ಟಿವಿ ಚರ್ಚೆಗಳಿಗೆ ತಲೆಬುಡವೇ ಇಲ್ಲದಂತಾಗಿದೆ. ಅನವಶ್ಯಕ ವಿಷಯದ ಆಯ್ಕೆ, ಅತಿ ರಂಜಿತ ಪ್ರಸ್ತಾವನೆ, ಅತಿಥಿಗಳ ವಾಕ್ಸಮರ, ವೈಯಕ್ತಿಕ ನಿಂದನೆ, ಬಳಸುವ ಭಾಷೆ, ಶಬ್ದಾವಳಿ ಮೂಲಕ ನಡೆಸುವ ಚರ್ಚಾ ಕಾರ್ಯಕ್ರಮ ಬೀದಿ ಜಗಳ ಎನ್ನ್ನಬಹುದಷ್ಟೇ. ಅಲ್ಲದೆ ಈ ಕಾರ್ಯಕ್ರಮಗಳ ನಿರೂಪಕನ ಪಾತ್ರ ನಿಜಕ್ಕೂ ಹಾಸ್ಯಾಸ್ಪದವಾಗಿರುತ್ತದೆ. ಭಾಗವಹಿಸುವ ವ್ಯಕ್ತಿಗಳು ತಾವು ಯಾವ ವಿಷಯದ ಕುರಿತು ಮಾತನಾಡಲು ಬಂದಿದ್ದೇವೆ ಎಂಬ ಅರಿವನ್ನು ಮರೆತು ಚರ್ಚೆಯನ್ನು ವಿಷಯಾಂತರ ಮಾಡಿ ಟಿವಿ ಸ್ಟುಡಿಯೋ ಕುಸ್ತಿ ಅಖಾಡವಾಗಿ ಬದಲಿಸುವ ಕಲೆ ಮಾತ್ರ ಇವರಿಗೆ ಗೊತ್ತು. ಜನ ಸಾಮಾನ್ಯರ ಬದುಕಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಪರಿಸರ, ಹಸಿವು, ಆರೋಗ್ಯ, ಭ್ರಷ್ಟಾಚಾರ, ಮಹಿಳಾ ಸುರಕ್ಷತೆ ಹಾಗೂ ರೈತರ ಸಂಕಟಗಳ ಬಗ್ಗೆ ಚರ್ಚೆ ವಾಹಿನಿಗಳಿಗೆ ಬೇಕಾಗಿಲ್ಲ. ಕೆಲವು ಚಾನೆಲ್‌ಗಳಿಗೆ ಹಿಂದೂ - ಮುಸ್ಲಿಂ ವಿವಾದಾತ್ಮಕ ವಿಷಯಗಳೇ ಟಿಆರ್‌ಪಿ ಟಾನಿಕ್ ಆಗಿವೆ. ವೀಕ್ಷಕರು ಯಾವ ರೀತಿಯ ಚರ್ಚೆ ಬಯಸುತ್ತಾರೆ ಎಂಬ ಕನಿಷ್ಠ ಪ್ರಜ್ಞೆಯೂ ಕೆಲವು ಸುದ್ದಿ ವಾಹಿನಿಗಳಿಗೆ ಇಲ್ಲ. ಆದರೆ ಇವರು ವ್ಯವಸ್ಥಿತವಾಗಿ ನಡೆಸುತ್ತಿರುವ ಅಜೆಂಡಾವನ್ನು ಜಾಗೃತ ವೀಕ್ಷಕರು ಗಮನಿಸುತ್ತಿದ್ದಾರೆ. ಒಂದು ಸುಳ್ಳು ನೂರು ಸಾರಿ ಹೇಳಿ ಅದನ್ನು ಸತ್ಯವೆಂಬ ರೀತಿಯಲ್ಲಿ ಬಿಂಬಿಸಬಹುದು. ಆದರೆ ಸತ್ಯವನ್ನು ನಿರಂತರ ಮಾರೆಮಾಚಲು ಸಾಧ್ಯವಿಲ್ಲ ಎಂಬುದನ್ನು ಇಂತಹ ಚಾನಲ್‌ಗಳವರು ಮರೆಯಬಾರದು.

Writer - -ಜೈನಬ್ ಎಂ. ಡೋಣೂರ ವಿಜಯಪುರ

contributor

Editor - -ಜೈನಬ್ ಎಂ. ಡೋಣೂರ ವಿಜಯಪುರ

contributor

Similar News