ರಣಜಿ ಕ್ವಾರ್ಟರ್‌ಫೈನಲ್: ವಿನಯ್‌ಕುಮಾರ್‌ಗೆ ಹ್ಯಾಟ್ರಿಕ್ ವಿಕೆಟ್

Update: 2017-12-07 06:30 GMT

ನಾಗ್ಪುರ, ಡಿ.7: ಕರ್ನಾಟಕದ ನಾಯಕ ವಿನಯ್‌ಕುಮಾರ್ ಮುಂಬೈ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಇಲ್ಲಿ ಗುರುವಾರ ಆರಂಭವಾದ ರಣಜಿ ಪಂದ್ಯದ ಮೊದಲ ದಿನದಾಟದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಪೃಥ್ವಿ ಶಾ(2) ವಿಕೆಟ್ ಉಡಾಯಿಸಿದ ವಿನಯ್ ಆನಂತರ 3ನೇ ಓವರ್‌ನ ಮೊದಲ ಹಾಗೂ ಎರಡನೇ ಎಸೆತದಲ್ಲಿ ಗೋಕುಲ್ ಬಿಶ್ತ್(1) ಹಾಗೂ ಆಕಾಶ್ ಪಾರ್ಕರ್(0) ವಿಕೆಟ್ ಉರುಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ವಿನಯ್‌ಕುಮಾರ್ ಕರ್ನಾಟಕದ ಪರ ಆಡಿರುವ ತನ್ನ 100ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಈ ಹೊಸ ಮೈಲುಗಲ್ಲು ತಲುಪಿದ್ದಾರೆ.

ಆರಂಭಿಕ ಕುಸಿತಕ್ಕೆ ಒಳಗಾಗಿರುವ ಮುಂಬೈ ತಂಡ 24 ಓವರ್‌ಗಳಲ್ಲಿ 74 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News