ಹೆಬ್ಬಾವು ಹಿಡಿದು ವಿದ್ಯಾರ್ಥಿಗಳ ಆತಂಕ ದೂರ ಮಾಡಿದ ಕಾಲೇಜು ಪ್ರೊಫೆಸರ್!

Update: 2017-12-08 05:37 GMT

ಕಾನ್ಪುರ, ಡಿ.7: ಅಲಹಾಬಾದ್‌ನ ಶ್ಯಾಮ್ ಪ್ರಸಾದ್ ಮುಖರ್ಜಿ ಸರಕಾರಿ ಪದವಿ ಕಾಲೇಜು ಆವರಣಕ್ಕೆ 12 ಅಡಿ ಉದ್ದದ ಹೆಬ್ಬಾವು ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಭಯಹುಟ್ಟಿಸಿತ್ತು. ಆಗ ಮತ್ತೊಂದು ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕರೊಬ್ಬರು ಹೆಬ್ಬಾವುವನ್ನು ಹಿಡಿದು ವಿದ್ಯಾರ್ಥಿಗಳ ಆತಂಕ ದೂರ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾವನ್ನು ಒಪ್ಪಿಸಿದರು.

ಕಾಲೇಜು ವಿದ್ಯಾರ್ಥಿಗಳ ಫೋನ್ ಕರೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಸ್ಯಶಾಸ್ತ್ರ ವಿಭಾಗದ ಹಿರಿಯ ಪ್ರೊಫೆಸರ್ ಎನ್.ಬಿ. ಸಿಂಗ್ ಸುಮಾರು 40 ಕೆಜಿ ತೂಕದ ಹೆಬ್ಬಾವುವನ್ನು ಹಿಡಿದು ಚಕಿತಗೊಳಿಸಿದರು.

‘‘ಹೆಬ್ಬಾವು ವಿದ್ಯಾರ್ಥಿಗಳ ಹಾಸ್ಟಲ್‌ನಲ್ಲಿ ಅಡಗಿ ಕುಳಿತಿತ್ತು. ಅದನ್ನು ಹಿಡಿಯಲು ತುಂಬಾ ಪ್ರಯತ್ನ ಪಡಬೇಕಾಯಿತು’’ ಎಂದು ಪ್ರೊಫೆಸರ್ ಸಿಂಗ್ ಹೇಳಿದ್ದಾರೆ.

ಪ್ರೊಫೆಸರ್ ಸಿಂಗ್ ಈತನಕ ಒಂದು ಡಜನ್‌ಗೂ ಅಧಿಕ ಹಾವುಗಳನ್ನು ಹಿಡಿದ ಅನುಭವವಿದೆ. ‘‘ಹೆಬ್ಬಾವುಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ಉದ್ದೇಶದಿಂದ ಅವುಗಳನ್ನು ಹಿಡಿಯುವ ಕೆಲಸ ಮಾಡುತ್ತಿದ್ದೇನೆ. ಹೆಬ್ಬಾವುಗಳನ್ನು ಕೆಣಕಿದರೆ ಮಾತ್ರ ಅವುಗಳು ಅಪಾಯಕಾರಿ. ಅವುಗಳನ್ನು ಕೆಣಕದಿದ್ದರೆ ಏನೂ ಮಾಡುವುದಿಲ್ಲ’’ ಎಂದು ಸಿಂಗ್ ಹೇಳಿದರು.

ಹೆಬ್ಬಾವುಗಳು ವಿಶ್ವದ ಅತ್ಯಂತ ದೊಡ್ಡ ಜಾತಿಯ ಹಾವು. ವಿಷಪೂರಿತವಲ್ಲದ ಈ ಹಾವುಗಳು ಸಾಮಾನ್ಯವಾಗಿ ಆಫ್ರಿಕ, ಏಷ್ಯಾ ಹಾಗೂ ಆಸ್ಟ್ರೇಲಿಯ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News