ಧೈರ್ಯವಿದ್ದರೆ ಸದಾನಂದಗೌಡ ನನ್ನ ಪುತ್ರನ ವಿರುದ್ಧ ಸ್ಪರ್ಧಿಸಲಿ: ಸಿಎಂ ಸಿದ್ದರಾಮಯ್ಯ ಸವಾಲು

Update: 2017-12-10 12:43 GMT

ಬೆಂಗಳೂರು, ಡಿ. 10: ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಪಕ್ಷ ಟಿಕೆಟ್ ನೀಡಿದರೆ ನನ್ನ ಪುತ್ರ ಸ್ಪರ್ಧೆ ಮಾಡಲಿದ್ದಾನೆ. ಧೈರ್ಯವಿದ್ದರೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಎದುರಾಳಿಯಾಗಿ ಸ್ಪರ್ಧೆ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ರವಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಡಿ.ವಿ.ಸದಾನಂದಗೌಡರಿಗೆ ಬಿಜೆಪಿ ವರುಣಾ ಕ್ಷೇತ್ರದ ಉಸ್ತುವಾರಿ ನೀಡಿದ ಕೂಡಲೇ ನನಗೇಕೆ ನಡುಕ ಉಂಟಾಗುತ್ತದೆ? ಕ್ಷೇತ್ರದ ಬಗ್ಗೆ ಅವರಿಗೇನು ಗೊತ್ತಿದೆ? ಬಿಜೆಪಿ ಆ ಕ್ಷೇತ್ರದಲ್ಲಿ ಗೆಲ್ಲೋಕೆ ಸಾಧ್ಯವೇ? ಎಂದು  ಪ್ರಶ್ನಿಸಿದರು.

ಕಳೆದ ಚುನಾವಣೆಯಲ್ಲಿ 32 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಡಿವಿಎಸ್‌ಗೆ ಕ್ಷೇತ್ರದ ಉಸ್ತುವಾರಿ ನೀಡಿದ ಕೂಡಲೇ ಬದಲಾವಣೆ ಸಾಧ್ಯವೇ? ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮರು ಪ್ರಶ್ನೆ ಹಾಕಿದ ಸಿದ್ದರಾಮಯ್ಯ, ಬಿಜೆಪಿಗೆ ಅಷ್ಟು ಅನುಕೂಲವಿದ್ದರೆ ಬೇರೆಯವರನ್ನು ನಿಲ್ಲಿಸಿ ಬಲಿಕೊಡುವ ಬದಲು ಸದಾನಂದಗೌಡ ಸ್ಪರ್ಧೆ ಮಾಡಲಿ ಎಂದು ಆಹ್ವಾನಿಸಿದರು.

ಸದಾನಂದಗೌಡರಿಗೆ ವರುಣಾ ಕ್ಷೇತ್ರದ ಅರಿವೇ ಇಲ್ಲ. ಸುಮ್ಮನೆ ಏನೇನೋ ಮಾತನಾಡುತ್ತಿದ್ದಾರೆ. ತಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಸ್ಪರ್ಧಿಸಲಿದ್ದಾನೆ ಎಂದ ಅವರು, ನಾನು ಯಾರಿಗೂ ಭಯ ಬೀಳುವುದಿಲ್ಲ. ಸುಮ್ಮನೆ ಏನೇನೋ ಭಾಷಣ ಬೀಗಿಯೋದಲ್ಲ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News