ಕ್ಯಾನ್ಸಾಸ್ ಶೂಟೌಟ್: ಗುಂಡೇಟು ತಿಂದು ಭಾರತೀಯ ವ್ಯಕ್ತಿಯನ್ನು ರಕ್ಷಿಸಿದ ಇವಾನ್ ಗೆ ಟೈಮ್ ಮ್ಯಾಗಝಿನ್ ಗೌರವ

Update: 2017-12-11 07:33 GMT

ಹೌಸ್ಟನ್,ಡಿ.11 : ಈ ವರ್ಷದ ಫೆಬ್ರವರಿಯಲ್ಲಿ ಕಾನ್ಸಾಸ್ ನ ಒಲೇತ್ ಎಂಬಲ್ಲಿನ ಬಾರ್ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಶ್ರೀನಿವಾಸ್ ಕುಚಿಬೊತ್ಲ (32) ಮೃತಪಟ್ಟು ಆತನ ಸಹೋದ್ಯೋಗಿ ಅಲೋಕ್ ಮದಸನಿ ಗಂಭೀರ ಗಾಯಗೊಂಡಿದ್ದರೆ, ಅವರನ್ನು ರಕ್ಷಿಸಲು ಮುಂದಾಗಿ ಗುಂಡು ತಗಲಿ ಗಾಯಗೊಂಡಿದ್ದ ಅಮರಿಕಾದ ನಾಗರಿಕ ಇಯಾನ್ ಗ್ರಿಲ್ಲೊಟ್ ಎಂಬಾತನಿಗೆ ಟೈಮ್ ಮ್ಯಾಗಝಿನ್  ಗೌರವ ನೀಡಿದ್ದು ಆತನನ್ನು ``5 ಹೀರೋಸ್ ಹೂ ಗೇವ್ ಅಸ್ ಹೋಪ್ ಇನ್ 2017'' ಇವರಲ್ಲಿ ಒಬ್ಬರನ್ನಾಗಿಸಿದೆ.

ಭಾರತೀಯರನ್ನು ಗುರಿಯಾಗಿಸಿದ್ದ ಇದು ಜನಾಂಗೀಯ ದಾಳಿಯಾಗಿತ್ತು. “ಆ ದಿನ ನಾನು  ಅವರ ಸಹಾಯಕ್ಕೆ ಧಾವಿಸಿರದೇ ಇದ್ದರೆ ನನಗೆ ಪಶ್ಚಾತ್ತಾಪವಾಗುತ್ತಿತ್ತು'' ಎಂದು ನಂತರ ಇಯಾನ್ ಹೇಳಿಕೊಂಡಿದ್ದನ್ನು ಟೈಮ್ ಮ್ಯಾಗಝಿನ್ ವರದಿ ಮಾಡಿತ್ತು. “ಬಾರಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ಬೆಂಕಿಯ ಗೆರೆಯನ್ನು ಮೆಟ್ಟಿದ್ದರು,'' ಎಂದು ಟೈಮ್ ಮ್ಯಾಗಝಿನ್ ಇಯಾನ್‍ನನ್ನು ಬಣ್ಣಿಸಿದೆ.

ಹೌಸ್ಟನ್ ನಗರದ ಭಾರತೀಯ-ಅಮೆರಿಕನ್ ಸಮುದಾಯ  ಇತ್ತೀಚೆಗೆ  ಇಯಾನ್ ಗೆ “ಎ ಟ್ರೂ ಅಮೆರಿಕನ್ ಹೀರೋ” ಎಂಬ ಬಿರುದು ನೀಡಿ ಗೌರವಿಸಿತ್ತಲ್ಲದೆ ಆತನ ಹುಟ್ಟೂರಾದ ಕಾನ್ಸಾಸ್ ನಲ್ಲಿ ಆತನಿಗೆ ಮನೆಯೊಂದನ್ನು ಖರೀದಿಸಲು  ಒಂದು ಲಕ್ಷ ಡಾಲರ್  ಧನಸಹಾಯವನ್ನೂ ಸಂಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News