ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಎಐಟಿ ಸಹಕಾರಿ: ಎ.ಎನ್.ಮಹೇಶ್

Update: 2017-12-11 12:19 GMT

ಚಿಕ್ಕಮಗಳೂರು, ಡಿ.11: ಮನುಷ್ಯನ ಬಹುಕಾಲದ ಜೀವನವು ಶಾಲೆಯಲ್ಲಿ ಮತ್ತು ವ್ಯಾಸಂಗದಲ್ಲಿ ಕಳೆದಿರುತ್ತದೆ. ಇದರ ನೆನಪು ಮತ್ತು ವಿಶ್ವಾಸದ ಸಲುವಾಗಿ ಓದಿದ ವಿದ್ಯಾಸಂಸ್ಥೆಯ ಜೊತೆ ಹೆಚ್ಚಿನ ಸಂಭಂಧವನ್ನು ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ ಎಂದು ಅರಣ್ಯ ವಸತಿ ವಿಹಾರದಾಮದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಅವರು ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾವೇಶ-2017ನ್ನು ದೀಪ ಹಚ್ಚಿ ಉಧ್ಘಾಟಿಸಿ ಮಾತನಾಡಿದರು. ಈ ಹಿಂದೆ ನನ್ನ ಎಐಟಿ ಕಾಲೇಜಿನಲ್ಲಿ ಅಭ್ಯಸಿಸಿದ ನೆನಪಿನ ಬುತ್ತಿ ಅಳಿಸಲು ಸಾದ್ಯವಿಲ್ಲ. ಇಲ್ಲಿ ಮಾಡಿದ ಚೇಷ್ಠೆ ಮತ್ತು ತರಲೆಗಳ ಜೊತೆ ಹೊಸ ಹೊಸ ವಿಚಾರಗಳನ್ನು ಸಹ ಮೆಲುಕು ಹಾಕುತಿದ್ದೆವು. 

ಈಗ ಪ್ರತಿ ವರ್ಷವೂ ರ್ಯಾಂಕ್ ಗಳಿಸುವ ಈ ಕಾಲೇಜಿನ ಬೆಳವಣಿಗೆಗೆ ಇಲ್ಲಿನ ಪ್ರಾಂಶುಪಾಲರು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ಹಾಗೂ ಆಡಳಿತ ವರ್ಗದ ಶ್ರಮ ಶ್ಲಾಘನೀಯ. ಇದು ನಮ್ಮ ಕಾಲೇಜು ಮತ್ತು ನಮ್ಮ ಕಾರ್ಯಕ್ರಮ. ನಾವೆಲ್ಲರು ಪ್ರತಿವರ್ಷವು ಅವಶ್ಯವಾಗಿ ಸೇರುವುದು ನಮ್ಮ ಕರ್ತವ್ಯ ಮತ್ತು ಮಹತ್ವದ ಸಂಗತಿ. ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಎಐಟಿ ಸಹಕಾರಿ ಎಂದು ಹೇಳಿದರು. 

ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ, ಹಸಿರಿನಿಂದ ಕಂಗೊಳಿಸುತ್ತಿರುವ ಈ ಕಾಲೇಜು ಕಳೆದ 37 ವರ್ಷಗಳ ಹಿಂದೆ ಪೂಜ್ಯ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ದೂರದೃಷ್ಟಿಯ ಫಲವಾಗಿ ಸ್ಥಾಪಿತವಾಗಿದ್ದು ಅತ್ಯುತ್ತಮ ವಿದ್ಯಾರ್ಜನೆಯ ಜೊತೆ ಶಿಸ್ತು, ಸಂಯಮ ಮತ್ತು ಕ್ರಿಯಾಶಕ್ತಿಯನ್ನು ಬೆರೆಸಿ ವಿದ್ಯಾರ್ಥಿಗಳಿಗೆ ಒದಗಿಸುವುದಕ್ಕೆ ಬದ್ಧವಾಗಿದೆ. ಈ ಕಾಲೇಜಿನ ಬೆಳವಣಿಗೆಗೆ ಹಿಂದಿನ ಪ್ರಾಂಶುಪಾಲರಾದ ಪ್ರೊ. ಎಸ್. ಟಿ. ನಾಗರಾಜ ಮತ್ತು   ಡಾ|| ಎನ್. ಗೋವಿಂದರಾಜುರವರ ಪರಿಶ್ರಮ ಶ್ಲಾಘನೀಯ ಎಂದು ಹೇಳಿದರು. 

ಇಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಪ್ರತಿ ವರ್ಷವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಅತ್ಯುನ್ನತ ರ್ಯಾಂಕ್‍ಗಳನ್ನು ಪಡೆದು ಹೆಸರುವಾಸಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎಐಟಿ ಅಲ್ಯುಮಿನಿ ಅಸೋಷಿಯೇಷನ್‍ನ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಮುಖ್ಯಸಂಘಟಕರಾದ ಡಾ.ಜಿ.ಎಂ. ಸತ್ಯನಾರಾಯಣ ಮಾತನಾಡಿದರು. ಡಾ.ಪುಷ್ಪರವಿಕುಮಾರ್ ಸಂಪಾದಕತ್ವದಲ್ಲಿ ಕಾಲೇಜಿನ ಮ್ಯಾಗಜಿನ್‍ನ 31ನೇ ಆವೃತ್ತಿಯನ್ನು  ಬಿಡುಗಡೆಗೊಳಿಸಲಾಯಿತು. ಇತ್ತೀಚೆಗೆ ನಿಧನರಾದ ಎಐಟಿ ಹಳೆಯ ವಿದ್ಯಾರ್ಥಿ ಮತ್ತು ಪ್ರಖ್ಯಾತ ಗಾಯಕ ಎಲ್.ಎನ್.ಶಾಸ್ತ್ರಿ, ಸಿ.ಸುರೇಶ್, ಪುಗಜೇಂದಿ ಅರಿವರಧನ್, ಸಂಜಯ್, ಶ್ರೀಕಾಂತ್ ಉಪಾಧ್ಯಾಯ, ಪವನ್ ಬಾಣೂರ್, ನವೀನ್, ಚಂದ್ರಶೇಖರ್ ಗಣಪತಿರಿಗೆ ಸಂತಾಪ ಸೂಚಿಸಲಾಯಿತು. 

ಕಾರ್ಯಕ್ರಮದ ಅಂತ್ಯದಲ್ಲಿ ಹಳೆಯ ವಿದ್ಯಾರ್ಥಿಗಳಾದ ವಂಶಿಕೃಷ್ಣ, ಉಮೇಶ್ ತಿವಾರಿ, ಸತ್ಯಮೆದಾಳ, ಕ್ಷಮಾಭಾನು ಮತ್ತಿತರು ಕಾಲೇಜಿನ ಹಳೆಯ ನೆನಪುಗಳನ್ನು ಹಂಚಿಕೊಂಡರು. ಹಳೆಯ ವಿದ್ಯಾರ್ಥಿನಿ ಶ್ರೀಮತಿ ಕೆ.ಎಂ.ಕವಿತ ಪ್ರಾರ್ಥಿಸಿದರು.  ಸಹಪ್ರಾದ್ಯಾಪಕಿ ಶ್ರೀಮತಿ ನಾಗವೇಣಿ ಮತ್ತು ಅನಿತ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News