30 ಜಾನಪದ ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ

Update: 2017-12-11 12:47 GMT

ಬೆಂಗಳೂರು, ಡಿ.11: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30 ಜಾನಪದ ಕಲಾವಿದರಿಗೆ 2017-18ನೆ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಲಾಗುತ್ತಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಿಗೂ ಆದ್ಯತೆ ನೀಡಲಾಗಿದ್ದು, 30 ಜಿಲ್ಲೆಗಳಿಂದ ಜಿಲ್ಲೆಗೊಬ್ಬರಂತೆ 30 ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಇಬ್ಬರು ಜಾನಪದ ತಜ್ಞರಿಗೆ ಅಕಾಡೆಮಿ ಪ್ರಶಸ್ತಿ ನೀಡಲಾಗುತ್ತಿದೆ. ಕಲಾವಿದರಿಗೆ 25 ಸಾವಿರ ಹಾಗೂ ತಜ್ಞರಿಗೆ 50 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.

ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆ ಮಾಡಿ, ಜಿಲ್ಲೆಯಲ್ಲಿ ಕಲಾವಿದರು ಮಾಡಿರುವ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿ.28 ಮತ್ತು 29 ರಂದು ಸಾಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದರು.

ಪ್ರಶಸ್ತಿಗೆ ಆಯ್ಕೆಯಾದವರು: ಗಂಗ ನರಸಮ್ಮ(ಸೋಬಾನೆ ಪದ, ರಾಮನಗರ), ಸಿದ್ಧನಗೌಡ(ಜಾನಪದ ಗಾಯನ, ದಾವಣಗೆರೆ), ಕೆ.ಆರ್.ಹೊಸಳಯ್ಯ(ವೀರಭದ್ರನ ಕುಣಿತ, ತುಮಕೂರು), ಎಚ್.ಕೆ.ಪಾಪಣ್ಣ(ದಾಸರ ಪದ, ಬೆಂಗಳೂರು ನಗರ), ಅಕ್ಕಮ್ಮಯ್ಯ(ಮದುವೆ ಹಾಡುಗಳು, ಬೆಂಗಳೂರು ಗ್ರಾಮಾಂತರ), ಮಾರಮ್ಮ(ಸೋಬಾನೆ ಪದ, ಕೋಲಾರ), ಶಾಂತಮ್ಮ(ಸಂಪ್ರದಾಯ ಪದ, ಚಿಕ್ಕಬಳ್ಳಾಪುರ), ಡಿ.ತಿಮ್ಮಪ್ಪ(ಕೋಲಾಟದ ಪದ, ಚಿತ್ರದುರ್ಗ), ಕೆ.ವಾಸುದೇವಪ್ಪ(ಜನಪದ ವೈದ್ಯ, ಶಿವಮೊಗ್ಗ), ಹನುಮವ್ವ ವಾಲೀಕಾರ(ಸಂಪ್ರದಾಯ ಪದ, ಕೊಪ್ಪಳ), ಶಿವಮ್ಮ(ಬುರ್ರಕಥೆ, ಬಳ್ಳಾರಿ), ಶಿವಪ್ಪ ಹೆಬ್ಬಾಳ(ಹೆಜ್ಜೆ ಕುಣಿತ, ಯಾದಗಿರಿ), ರುಕ್ಕವ್ವ(ತತ್ವಪದ, ರಾಯಚೂರು), ನಾಗಪ್ಪ ಕಾಶಂಪೂರ(ಮೊಹರಂ ಪದ, ಬೀದರ), ಇಸ್ಮಾಯಿಲ್ ಸಾಬ(ಗೀಗೀ ಪದ, ಕಲಬುರಗಿ), ವೀರಭದ್ರಪ್ಪ ಯ.ಮಳ್ಳೂರ(ಗೀಗೀ ಭಜನೆ ಪದ, ಧಾರವಾಡ), ಜಕ್ಕವ್ವ ಸತ್ಯಪ್ಪ ಮಾದರ(ಗೀಗೀ ಪದ, ಬಾಗಲಕೋಟೆ), ಸಾಬವ್ವ ಅಣ್ಣಪ್ಪ ಕೋಳಿ(ಸಂಪ್ರದಾಯ ಪದ, ಬೆಳಗಾವಿ), ಜಗದೇವ ಗೊಳವ್ವ ಮಾಡ್ಯಾಳ(ಭಜನೆ, ವಿಜಯಪುರ), ಮಹಾರುದ್ರಪ್ಪ ವೀರಪ್ಪ ಇಟಗಿ(ಪುರವಂತಿಕೆ, ಹಾವೇರಿ), ರಾಮಪ್ಪ ದ್ಯಾಮಪ್ಪ ಕೊರವರ(ಡೊಳ್ಳಿನ ಪದ, ಗದಗ), ಸೋಮಯ್ಯ ಸಣ್ಣಗೊಂಡ(ಗೊಂಡರ ಢಕ್ಕೆ ಕುಣಿತ, ಉತ್ತರ ಕನ್ನಡ), ಪುಟ್ಟಸ್ವಾಮಿ(ಬೀಸು ಕಂಸಾಳೆ, ಮೈಸೂರು), ಎಸ್.ಜಿ.ಜಯಣ್ಣ(ಚೌಡಕಿ ಪದ, ಚಿಕ್ಕಮಗಳೂರು), ಕೃಷ್ಣೇಗೌಡ(ಗಾಡುರಿ ಗೊಂಬೆ, ಮಂಡ್ಯ), ಸಣ್ಣಶೆಟ್ಟಿ(ನೀಲಗಾರರ ಕಾವ್ಯ, ಚಾಮರಾಜನಗರ), ಲಕ್ಷ್ಮಮ್ಮ(ಭಜನೆ ಪದ, ಹಾಸನ), ಲೀಲಾ ಶೆಡ್ತಿ(ಸಿರಿ ಪಾಡ್ದಾನ, ದಕ್ಷಿಣ ಕನ್ನಡ), ರಾಣಿ ಮಾಚಯ್ಯ(ಉಮ್ಮತ್ತಾಟ್, ಕೊಡಗು), ಗುರುವ ಡೋಲು(ಕೊರಗರ ಡೋಲು, ಉಡುಪಿ).

ತಜ್ಞ ಪ್ರಶಸ್ತಿ ಪಡೆದವರು: ಹುಚ್ಚಪ್ಪ ಮಾಸ್ತರ(ಡಾ.ಜೀ.ಶಂ.ಪ ತಜ್ಞ ಪ್ರಶಸ್ತಿ, ಶಿವಮೊಗ್ಗ) ಹಾಗೂ ಶಾಲಿನಿ ರಘುನಾಥ್(ಡಾ.ಬಿ.ಎಸ್.ಗದ್ದಗಿಮಠ ತಜ್ಞ ಪ್ರಶಸ್ತಿ, ಧಾರವಾಡ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News