ಚರಂಡಿ ಹೂಳೆತ್ತಲು ಆಗ್ರಹಿಸಿ ಮಾರಳ್ಳಿ ಗ್ರಾಮಸ್ಥರಿಂದ ತಾಪಂ ಸಹಾಯಕ ನಿರ್ದೇಕರಿಗೆ ಮನವಿ

Update: 2017-12-15 05:44 GMT

ಹನೂರು, ಡಿ.15: ರಾಮಾಪುರ ಸಮೀಪದ ಮಾರಳ್ಳಿ ಗ್ರಾಮದಲ್ಲಿ ಚರಂಡಿ ಹೂಳು, ನೀರಿನ ತೊಂಬೆ ಸ್ವಚ್ಛತೆ ಮತ್ತು ತೊಂಬೆಯ ಮುಚ್ಚಳ ಇಲ್ಲದಿರುವುದನ್ನು ಸರಿಪಡಿಸುವಂತೆ ತಾಪಂ ಸಹಾಯಕ ನಿರ್ದೇಕ ಲಿಂಗರಾಜು ರವರಿಗೆ ಮಾರಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಗ್ರಾಮದ ನಿವಾಸಿಗಳು ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಕುಡಿಯುವ ನೀರು ಅಶುದ್ಧವಾಗಿರುವುದು ಮತ್ತು ಗ್ರಾಮದ ಅನೈರ್ಮಲ್ಯವೇ ಇದಕ್ಕೆ ಕಾರಣ. ಈ ಬಗ್ಗೆ ಹಲವಜ ಬಾರಿ ದಿನ್ನಳ್ಳಿ ಪಂಚಾಯತಿ ಅಡಳಿತ ಮಂಡಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ  ದೂರಿದ್ದಾರೆ.

ಲಿಂಗರಾಜುರವರು ಸ್ವಚ್ಛ ಭಾರತ್ ಅಭಿಯಾನದಡಿ ಶೌಚಾಲಯ ನಿರ್ಮಾಣದ ಪ್ರಗತಿ ಮತ್ತು ನರೇಗಾ ಕಾರ್ಯಕ್ರಮಗಳನ್ನು ವೀಕ್ಷಿಸಲು ದಿನ್ನಳ್ಳಿ ಮತ್ತು ಮೀಣ್ಯ ಪಂಚಾಯತ್ ಗೆ ಭೇಟಿ ನೀಡಿದ ಸಂದರ್ಭ ಮಾರಳ್ಳಿ ಗ್ರಾಮಸ್ಥರು ಈ ಮನವಿ ಸಲ್ಲಿಸಿ ಬೇಗ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News