ಕ್ರಿಕೆಟಿಗ ಅಜಿಂಕ್ಯ ರಹಾನೆ ತಂದೆಯ ಬಂಧನ

Update: 2017-12-15 10:12 GMT

ಕೊಲ್ಲಾಪುರ್,ಡಿ.15 : ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬುರಾವ್ ರಹಾನೆ ಚಲಾಯಿಸುತ್ತಿದ್ದ ಕಾರು ಇಂದು ಬೆಳಿಗ್ಗೆ  67 ವರ್ಷದ ಮಹಿಳೆಯೊಬ್ಬಳಿಗೆ ಢಿಕ್ಕಿ ಹೊಡೆದು ಆಕೆಯ ಸಾವಿಗೆ ಕಾರಣವಾಗಿದ್ದು, ಮಧುಕರ್ ಅವರನ್ನು ಈ ಸಂಬಂಧ ಬಂಧಿಸಲಾಗಿದೆ. ಅಪಘಾತ ನಡೆದ ಸಂದರ್ಭ ರಹಾನೆ ಕುಟುಂಬದ ಎಲ್ಲಾ ಸದಸ್ಯರೂ ಕಾರಿನಲ್ಲಿದ್ದರು ಎಂದು ಹೇಳಲಾಗಿದೆ.

ಮಧುಕರ್ ಅವರು ಚಲಾಯಿಸುತ್ತಿದ್ದ ಹುಂಡೈ ಐ-20 ಕಾರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಿಗ್ಗೆ 4 ಗಂಟೆ ಹೊತ್ತಿಗೆ ಅತಿ ವೇಗದಲ್ಲಿ ಸಾಗುತ್ತಿದ್ದಾಗ  ಕಾರು ಚಾಲಕನ ನಿಯಂತ್ರಣ ತಪ್ಪಿ 67 ವರ್ಷದ ಆಶಾತಾಯಿ ಕಾಂಬ್ಲೆ ಎಂಬವರಿಗೆ ಢಿಕ್ಕಿ ಹೊಡೆದಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಅಲ್ಲಿ ಕೊನೆಯುಸಿರೆಳೆದಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News