ಆಸ್ಟ್ರೇಲಿಯದ ಅಂಡರ್-19 ವಿಶ್ವಕಪ್ ತಂಡದಲ್ಲಿ ಸ್ಟೀವ್ ವಾ ಪುತ್ರನಿಗೆ ಸ್ಥಾನ

Update: 2017-12-15 18:38 GMT

ಸಿಡ್ನಿ, ಡಿ.15: ಆಸ್ಟ್ರೇಲಿಯದ ಕ್ರಿಕೆಟ್ ದಂತಕತೆ ಸ್ಟೀವ್ ವಾ ಪುತ್ರ ಆಲ್‌ರೌಂಡ್ ಆಟಗಾರ ಆಸ್ಟಿನ್ ಶುಕ್ರವಾರ ಪ್ರಕಟಿಸಲಾಗಿರುವ 15 ಸದಸ್ಯರನ್ನು ಒಳಗೊಂಡ ಆಸ್ಟ್ರೇಲಿಯದ ಅಂಡರ್-19 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮುಂದಿನ ತಿಂಗಳು ನ್ಯೂಝಿಲೆಂಡ್‌ನಲ್ಲಿ ಅಂಡರ್-19 ವಿಶ್ವಕಪ್ ಟೂರ್ನಿ ನಡೆಯಲಿದೆ. ಆಸ್ಟ್ರೇಲಿಯ ತಂಡವನ್ನು ಜೇಸನ್ ಸಂಘಾ ನಾಯಕನಾಗಿ ಮುನ್ನಡೆಸಲಿದ್ದಾರೆ. ತಂಡದಲ್ಲಿ ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಸದೆರ್‌ಲ್ಯಾಂಡ್‌ರ ಪುತ್ರ ವಿಕ್ಟೋರಿಯಾ ಆಲ್‌ರೌಂಡರ್ ವಿಲ್ ಸದೆರ್‌ಲ್ಯಾಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

 ಆಸ್ಟ್ರೇಲಿಯ 2010ರಲ್ಲಿ ಕೊನೆಯ ಬಾರಿ ಮಿಚೆಲ್ ಮಾರ್ಷ್ ನೇತೃತ್ವದಲ್ಲಿ ಅಂಡರ್-19 ವಿಶ್ವಕಪ್‌ನ್ನು ಜಯಿಸಿತ್ತು. ವಿಶ್ವಕಪ್‌ನಲ್ಲಿ ‘ಬಿ’ ಗುಂಪಿನಲ್ಲಿರುವ ಆಸ್ಟ್ರೇಲಿಯ ಜ.14 ರಂದು ಭಾರತವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಝಿಂಬಾಬ್ವೆ(ಜ.17) ಹಾಗೂ ಪಪುವಾ ನ್ಯೂ ಗಿನಿಯಾ(ಜ.19) ತಂಡವನ್ನು ಕ್ರೈರ್ಸ್ಟ್‌ಚರ್ಚ್‌ನಲ್ಲಿ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News