ಫೆ.8ರಿಂದ ಪ್ರಥಮ ಪಿಯುಸಿ ಪರೀಕ್ಷೆ

Update: 2017-12-16 16:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 16: ಪ್ರಥಮ ಪಿಯಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು, 2018ರ ಫೆ.8ರಿಂದ 21ರ ವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಸಿ.ಶಿಖಾ ತಿಳಿಸಿದ್ದಾರೆ.

ಫೆ.8ಕ್ಕೆ(ಗುರುವಾರ) ಹಿಂದಿ (ಬೆಳಗ್ಗೆ 9ರಿಂದ 12:15ರ ವರೆಗೆ), ಉರ್ದು, ಸಂಸ್ಕೃತ (ಮಧ್ಯಾಹ್ನ 2ರಿಂದ 5:15), ಫೆ.9ಕ್ಕೆ(ಶುಕ್ರವಾರ) ಭೂಗೋಳಶಾಸ್ತ್ರ, ಗಣಿತ, ಬೇಸಿಕ್ ಮ್ಯಾಥ್ಸ್(ಬೆಳಗ್ಗೆ), ತರ್ಕಶಾಸ್ತ್ರ, ಗೃಹ ವಿಜ್ಞಾನ(ಮಧ್ಯಾಹ್ನ), ಫೆ.12ಕ್ಕೆ(ಸೋಮವಾರ) ಸಮಾಜಶಾಸ್ತ್ರ, ಜೀವಶಾಸ್ತ್ರ(ಬೆಳಗ್ಗೆ).

ಫೆ.14ಕ್ಕೆ(ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ(ಬೆಳಗ್ಗೆ), ಮನಃಶಾಸ್ತ್ರ (ಮಧ್ಯಾಹ್ನ), ಫೆ.15ಕ್ಕೆ (ಗುರುವಾರ) ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ(ಬೆಳಗ್ಗೆ), ಫೆ.16ಕ್ಕೆ (ಶುಕ್ರವಾರ) ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೌತಶಾಸ್ತ್ರ(ಬೆಳಗ್ಗೆ), ಫೆ.17ಕ್ಕೆ(ಶನಿವಾರ) ಇತಿಹಾಸ, ಎಲೆಕ್ಟ್ರಾನಿಕ್ಸ್, ಗಣಕಶಾಸ್ತ್ರ(ಬೆಳಗ್ಗೆ).

ಫೆ.19ಕ್ಕೆ(ಸೋಮವಾರ) ಇಂಗ್ಲಿಷ್(ಬೆಳಗ್ಗೆ), ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ(ಮಧ್ಯಾಹ್ನ), ಫೆ.20ಕ್ಕೆ(ಮಂಗಳವಾರ) ಕನ್ನಡ, ತಮಿಳು, ತೆಲುಗು, ಮಳಯಾಳಂ. ಮರಾಠಿ, ಅರೇಬಿಕ್, ಫ್ರೆಂಚ್(ಬೆಳಗ್ಗೆ), ಫೆ.21ಕ್ಕೆ(ಬುಧವಾರ) ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಮತ್ತು ವೆಲ್‌ನೆಸ್(ಬೆಳಗ್ಗೆ).

ಈ ಹಿಂದಿನ ವೇಳಾಪಟ್ಟಿ ಪ್ರಕಾರ ಎಸ್‌ಎನ್‌ಕ್ಯೂಎಫ್ ಪರೀಕ್ಷೆಗಳನ್ನು ಫೆ.16ರಂದು ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಆ ವೇಳಾಪಟ್ಟಿ ಪರಿಷ್ಕರಿಸಿದ್ದು, ಅದರ ಬದಲು ಫೆ.21ರಂದು ನಡೆಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News