ಮದ್ಯ ನಿಷೇಧಾಜ್ಞೆ ಅವಧಿಯಲ್ಲಿ ಮದ್ಯ ಮಾರಾಟ : ಮೂರು ಪ್ರಕರಣ ದಾಖಲು

Update: 2017-12-17 13:50 GMT

ಶಿರಸಿ,ಡಿ17: ಜಿಲ್ಲಾ ದಂಡಾಧಿಕಾರಿಗಳ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಡಿ.12ರಿಂದ ಡಿ.14ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಈ ಸಂದರ್ಭದಲ್ಲಿ ಶಿರಸಿ ಉಪವಿಭಾಗದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿಕೊಂಡದ್ದು 45ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ತಾಲೂಕಿನ ಬನವಾಸಿ ಗ್ರಾಮದ ಪಂಪವನ ಕ್ರಾಸ್‍ನಿಂದ ಮಧುಕೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ಕೆಎ-15, ಕ್ಯೂ-1272ರಲ್ಲಿ ಶ್ರೀಧರ ರಾಮ ಆಚಾರಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ.

ವೆಂಕಟೇಶ ಹನುಮಂತ ನಾಯ್ಕ ಎನ್ನುವಾತ ತಾಲೂಕಿನ ಮದರವಳ್ಳಿ ಗ್ರಾಮದಲ್ಲಿರುವ ಅರಣ್ಯ ಪ್ರದೇಶದ ಮೂಲಕ ಒಂದು ಸಿಮೆಂಟ್ ಚೀಲದಲ್ಲಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಯನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ.

ಜಗದೀಶ ಮಾದೇವಪ್ಪ ಗೊರವರ ಜನತಾ ಕಾಲೋನಿ ನಿವಾಸಿ ಬನವಾಸಿ ಗ್ರಾಮದಲ್ಲಿರುವ ಪಂಪ ಸರ್ಕಲ್ ಹತ್ತಿರದಲ್ಲಿ ಮುಚ್ಚಲ್ಪಟ್ಟಿರುವ ಎಗ್ ರೈಸ್ ಹಿಂಭಾಗದಲ್ಲಿ ಚೀಲದಲ್ಲಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಯನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ. ಜಪ್ತಾದ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 45ಸಾವಿರ ರೂಗಳೆಂದು ಅಂದಾಜಿಸಲಾಗಿದೆ. 

ಜಿಲ್ಲಾಧಿಕಾರಿ ಎಸ್ ಎಸ್ ನಕುಲರವರ ನಿರ್ದೇಶನದಂತೆ ಅಬಕಾರಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಮಹೇಂದ್ರ ಎಸ್ ನಾಯ್ಕ, ಅಬಕಾರಿ ಉಪನಿರೀಕ್ಷಕರಾದ ಡಿ.ಎನ್ ಶಿರ್ಸಿಕರ್ ಹಾಗೂ ಶ್ರೀಮತಿ ಜ್ಯೋತಿಶ್ರೀ ಜಿ ನಾಯ್ಕ, ಅಬಕಾರಿ ಮುಖ್ಯ ರಕ್ಷಕರಾದ ಲೋಕೇಶ ವಿ ಬೊರಕರ್, ಅಬಕಾರಿ ರಕ್ಷಕರಾದ ಮೋಹನ ಕೆ ಮೊಗೇರ್, ಪ್ರಸನ್ನ ಉಮೇಶ ನೇತ್ರೇಕರ್, ಶ್ರೀಕಾಂತ ಹೆಚ್ ಜಾಧವ, ಕವಿತಾ ಚಮಗಾರ್ ಹಾಗೂ ಹಿರಿಯ ಚಾಲಕರಾದ ಎನ್ ಕೆ ವೈದ್ಯ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News