ಶ್ಲಾಘನೀಯ ಸಂಗತಿ

Update: 2017-12-20 18:32 GMT

ಮಾನ್ಯರೇ,

 ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳ ಬ್ಯಾಗ್ ಹೊರೆಯನ್ನು ತಪ್ಪಿಸಲು ದ.ಕ. ಜಿಲ್ಲೆಯಲ್ಲಿ ತಿಂಗಳ ಕೊನೆಯ ಶನಿವಾರ ಬ್ಯಾಗ್‌ರಹಿತ ದಿನವಾಗಿ ಮಾರ್ಪಡಿಸಲು ಸುತ್ತೋಲೆ ಹೊರಡಿಸಿರುವುದು ಮಕ್ಕಳ ಹಿತದೃಷ್ಟಿಯಿಂದ ಶ್ಲಾಘನೀಯ ಸಂಗತಿ.

ಈಗಿನ ಶಿಕ್ಷಣ ಪದ್ಧತಿಯಲ್ಲಿ ಪುಸ್ತಕಗಳ ಹೊರೆಯಿಂದಾಗಿಯೇ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಬ್ಯಾಗ್‌ನ ಭಾರವನ್ನು ನೋಡುವಾಗ ದೊಡ್ಡವರಿಗೇ ಭಯವಾಗುತ್ತದೆ. ಅದರಲ್ಲೂ ಹೆಚ್ಚಿನ ಶಾಲೆಗಳು ಜಾಗದ ಅಭಾವದಿಂದಾಗಿ ಮೂರ್ನಾಲ್ಕು ಮಹಡಿಗಳಲ್ಲಿ ಕಟ್ಟಲ್ಪಟ್ಟಿದ್ದು ಪುಸ್ತಕದ ಹೊರೆಯನ್ನು ಹೊತ್ತುಕೊಂಡು ಕಷ್ಟಪಟ್ಟು ಮಹಡಿ ಗಳ ಮೆಟ್ಟಲೇರುವ ಪರಿಸ್ಥಿತಿ ಮಕ್ಕಳಿಗಿದೆ.

ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳಲು ಒತ್ತಡ ರಹಿತ ವ್ಯವಸ್ಥೆ ಅವರಿಗೆ ಬೇಕು. ಇಲ್ಲದೆ ಹೋದಲ್ಲಿ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಬಳಲುವುದು ಖಂಡಿತ.

ಹೀಗಿರುವಾಗ ‘ಬ್ಯಾಗ್ ರಹಿತ ದಿನ’ವೆಂಬುದು ಮಕ್ಕಳ ಕಲಿಕೆಯ ಒತ್ತಡವನ್ನು ಒಂದಿಷ್ಟು ದೂರಮಾಡಿ ಅವರನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ. ಇಂತಹ ಮಾರ್ಪಾಡು ರಾಜ್ಯದೆಲ್ಲೆಡೆ ಶಾಲೆಗಳಿಗೆ ಬರಲಿ

Similar News