ಕರುಣಾಕರನ್ ರಾಜೀನಾಮೆ ಹೇಳಿಕೆಗೆ ಬದ್ಧ: ಕೇರಳ ಕೆಪಿಸಿಸಿ ಅಧ್ಯಕ್ಷ ಎಂ.ಎಂ. ಹಸನ್

Update: 2017-12-24 07:01 GMT

ತಿರುವನಂತಪುರಂ, ಡಿ.24: ಬೇಹುಗಾರಿಕೆ ಪ್ರಕರಣ, ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ರಾಜೀನಾಮೆ ಕುರಿತು ನಿನ್ನೆ ನೀಡಿದ್ದ ಹೇಳಿಕೆಗೆ ತಾನೀಗಲೂ ಬದ್ಧ ಎಂದು ಕೇರಳದ ಕೆಪಿಸಿಸಿ ಅಧ್ಯಕ್ಷ ಎಂ.ಎಂ. ಹಸನ್ ಹೇಳಿದ್ದಾರೆ. ಇದಕ್ಕೆ ಬೇರೆ ವಿವರಣೆಗಳ ಅಗತ್ಯವಿಲ್ಲ. ಹೆಚ್ಚು ಕಾಲದಿಂದ ಮನಸ್ಸಿನಲ್ಲಿದ್ದ ಭಾವನೆಯನ್ನು ಹೊರಗೆ ಹೇಳಿಕೊಂಡಿದ್ದೇನೆ ಅಷ್ಟೇ. ಈ ವಿಷಯದಲ್ಲಿ ಕೇರಳದ ಕಾಂಗ್ರೆಸ್ಸಿನೊಳಗಿನ ಗ್ರೂಪ್‌ಗಳಿಂದ ಏನಾದರೂ ಒತ್ತಡವಿತ್ತೇ ಎನ್ನುವ ವಿಷಯವನ್ನು ಈಗ ಚರ್ಚಿಸುವ ಅಗತ್ಯವಿಲ್ಲ ಎಂದು ಹಸನ್ ಹೇಳಿದರು.

ಇಸ್ರೊ ಬೇಹುಗಾರಿಕೆ ಪ್ರಕರಣದ ಸಮಯದಲ್ಲಿ ಕೆ. ಕರುಣಾಕರನ್ ರಾಜೀನಾಮೆ ಕೊಡುವಂತೆ ಮಾಡಲು ಪ್ರಯತ್ನಿಸಿದ್ದಕ್ಕೆ ತನಗೆ ಅಪರಾಧ ಪ್ರಜ್ಞೆ ಇದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ಕೊಡಿಸುವ ಪ್ರಕ್ರಿಯೆಯನ್ನೇ ಎ.ಕೆ. ಆಂಟನಿ ಬಲವಾಗಿ ವಿರೋಧಿಸಿದ್ದರು ಎಂದು ಹಸನ್ ಶನಿವಾರ ಹೇಳಿದ್ದರು.

  ಅಂದು ಕರುಣಾಕರನ್‌ರಿಗೆ ಮುಖ್ಯಮಂತ್ರಿಯಾಗಿ ಅವಧಿಯನ್ನು ಮುಗಿಸಲು ಅವಕಾಶ ಕೊಡಬೇಕಿತ್ತು. ಕರುಣಾಕರನ್‌ರ ವಿರುದ್ಧ ಕೆಲಸ ಮಾಡಿದ್ದರಲ್ಲಿ ತುಂಬ ದುಃಖವಿದೆ. ಕರುಣಾಕರನ್‌ರಿಗೆ ಹೊರಗೆ ಹೋಗುವ ದಾರಿ ತೆರೆದದ್ದು ಏಕೆ ಆ್ಯಂಟನಿಯೆಂದು ಅಂದು ಮಾಧ್ಯಮಗಳಲ್ಲಿ ವರದಿ ಬಂದಿದ್ದವು. ಅದು ಸರಿಯಲ್ಲ. ಕರುಣಾಕರನ್ ಮುಖ್ಯಸ್ಥಾನದಿಂದ ರಾಜೀನಾಮೆ ಕೊಡಿಸಲು ಪ್ರಯತ್ನಿಸಬಾರದೆಂದು ತನ್ನೊಡನೆ ಉಮ್ಮನ್ ಚಾಂಡಿ ಮತ್ತು ಆ್ಯಂಟನಿ ಅಂದು ಸೂಚಿಸಿದ್ದರು ಎಂದು ಹಸನ್ ನಿನ್ನೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News