ಸ್ವಘೋಷಿತ ದೇವಮಾನವ ವೀರೇಂದರ್ ದೀಕ್ಷಿತ್‌ಗೆ ತೃಶೂರಿನಲ್ಲಿಯೂ ಆಶ್ರಮ

Update: 2017-12-24 12:26 GMT

ಹೊಸದಿಲ್ಲಿ,ಡಿ.24: ಬಾಲಕಿಯರನ್ನು ಕೂಡಿಹಾಕಿ ಕಿರುಕುಳ ನೀಡುವ  ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ವೀರೇಂದರ್ ದೀಕ್ಷಿತ್‌ಗೆ ಕೇರಳದಲ್ಲಿಯೂ ಆಶ್ರಮ ಇದೆ. ತೃಶೂರಿನ ಕೆಚ್ಚೇರಿಯ ಸಮೀಪ ಎರನೆಲ್ಲೂರ್‌ಎಂಬಲ್ಲಿ ಈ ಆಶ್ರಮ ಕಾರ್ಯಾಚರಿಸುತ್ತಿದ್ದು, ಕೇರಳದಲ್ಲಿ ಮಾತ್ರವಲ್ಲ ದಕ್ಷಿಣಭಾರತದ ರಾಜ್ಯಗಳಲ್ಲಿ ಇದು ಶಾಖೆಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಭಾರತಾದ್ಯಂತ 20ಕ್ಕೂ ಹೆಚ್ಚು ಆಶ್ರಮಗಳನ್ನು ಸ್ವಯಂಘೋಷಿತ ದೇವಮಾನವ ವೀರೇಂದರ್ ದೇವ್ ದೀಕ್ಷಿತ್ ಹೊಂದಿದ್ದಾನೆ. ನೇಪಾಲದ ಕಾಠ್ಮಂಡುವಿನಲ್ಲಿ ಈತನ ಪ್ರಧಾನ ಆಶ್ರಮ ಇದೆ. ದಿಲ್ಲಿಯ ಹೊರಗಿನ ಆಶ್ರಮದಲ್ಲಿ ಸಿಬಿಐ ಉಸ್ತುವಾರಿಯಲ್ಲಿ ತನಿಖೆ ನಡೆಯಲಿದೆ. ಈ ನಡುವೆ ದೀಕ್ಷಿತ್‌ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಒಂಬತ್ತು ಆಶ್ರಮಗಳಲ್ಲಿ ದಿಲ್ಲಿ ಹೈಕೋರ್ಟು ನಿಯೋಜಿಸಿದ ತಂಡ ದಾಳಿ ಮುಂದುವರಿಸಿದೆ.

   ದಿಲ್ಲಿಯ ಮಹಿಳಾ ಆಯೋಗದ ನೇತೃತ್ವದಲ್ಲಿ ಶನಿವಾರ ದ್ವಾರಕಾ,ಉತ್ತಮ್ ನಗರ ಆಶ್ರಮದಲ್ಲಿದಾಳಿ ನಡೆದಿತ್ತು. ದ್ವಾರಕಾದ ಮೋಹನ್ ಗಾರ್ಡನ್‌ನ ಆಶ್ರಮದಿಂದ ಮೂವತ್ತಕ್ಕೂ ಹೆಚ್ಚು ಬಾಲಕಿಯರನ್ನು ಬಿಡುಗಡೆಗೊಳಿಸಲಾಗಿದೆ. ರೋಹಿಣಿಯ ಆಶ್ರಮದಿಂದ ಬಾಲಕಿಯರನ್ನು ನಾರಿ ನಿಕೇತನಕ್ಕೆ ವರ್ಗಾಯಿಸಲಾಗಿದೆ. ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಬಾಲಕಿಯರಾಗಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ದೃಢೀಕರಿಸಿದೆ. ರೋಹಿಣಿಯಲ್ಲಿ ದಾಳಿ ನಡೆದ ಬೆನ್ನಿಗೆ ಬೇರೆ ಕಡೆಗಳಿಂದ ಬಾಲಕಿಯರನ್ನು ಅಜ್ಞಾತ ಕೇಂದ್ರಕ್ಕೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ದಾಳಿಗೆ ಬಂದವರ ಜೊತೆ ಹೋಗಲು ಬಾಲಕಿಯರು ನಿರಾಕರಿಸಿದ್ದಾರೆ. ಅಧಿಕ ಪ್ರಮಾಣದಲ್ಲಿ ಅವರಿಗೆ ಮಾದಕವಸ್ತು ಚುಚ್ಚುಮದ್ದು ನೀಡಲಾಗಿದೆ. ಉತ್ತರ ಪ್ರದೇಶದ ಆಶ್ರಮದಲ್ಲಿ ಪೊಲೀಸರು 47ಬಾಲಕಿಯರನ್ನು ರಕ್ಷಿಸಿದ್ದಾರೆ. ದಿಲ್ಲಿಯ ಕಾರವಾಲ್‌ನಗರ, ಮಜ್ಲಿಸ್ ಪಾರ್ಕ್, ನಂಗ್‌ಳೋಯಿ, ಪಾಲಂ ವಿಹಾರಗಳಲ್ಲಿಯೂ ಆಶ್ರಮಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News