ಉತ್ತರ ಪ್ರದೇಶ : ವೈದ್ಯರ ಪಾರ್ಟಿಗೆ ರಷ್ಯನ್ ಬೆಲ್ಲಿ ನರ್ತಕಿಯರು, ಆ್ಯಂಬುಲೆನ್ಸ್ ನಲ್ಲಿ ಮದ್ಯ ಸರಬರಾಜು!

Update: 2017-12-26 07:35 GMT

ಮೀರತ್, ಡಿ.26: ಲಾಲಾ ಲಜಪತ್ ರಾಯ್ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಅತಿಥಿಗಳನ್ನು ರಂಜಿಸಲು ರಷ್ಯನ್ ಬೆಲ್ಲಿ ನರ್ತಕಿಯರನ್ನು ಕರೆಸಲಾಗಿತ್ತಲ್ಲದೆ ಮದ್ಯ ಸರಬರಾಜು ಮಾಡಲು ಆಸ್ಪತ್ರೆಯ ಆ್ಯಂಬುಲೆನ್ಸ್ ಗಳನ್ನು ಬಳಸಿದ ವಿದ್ಯಮಾನ ನಡೆದಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮುಜುಗರಗೊಂಡಿರುವ ಪ್ರಾಂಶುಪಾಲರು ಇದೀಗ ತನಿಖೆಗೆ ಆದೇಶಿಸಿದ್ದಾರೆ.

ಕಾಲೇಜಿನ 1992 ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ಹಳೆ ವಿದ್ಯಾರ್ಥಿಗಳೂ ಸೋಮವಾರ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಹಾಜರಿದ್ದರು. ಅಪರಾಹ್ನದ ಹೊತ್ತಿಗೆ ರಷ್ಯನ್ ನರ್ತಕಿಯರ ಪ್ರದರ್ಶನ ಆರಂಭಗೊಳ್ಳುತ್ತಿದ್ದಂತೆಯೇ ಮದ್ಯದ ಬಾಟಲಿಗಳಿರುವ ಪೆಟ್ಟಿಗೆಗಳು ಆ್ಯಂಬುಲೆನ್ಸ್ ನಲ್ಲಿ ಆಗಮಿಸಿದ್ದವು.

ಈ ಬಗ್ಗೆ ತನಗೆ ಸಂಜೆಯಷ್ಟೇ ತಿಳಿದು ಬಂದಿತ್ತು ಎಂದು ಪ್ರಾಂಶುಪಾಲ ವಿನಯ್ ಅರ್ಗವಾಲ್ ತಿಳಿಸಿದ್ದು, ಮದ್ಯ ಸರಬರಾಜು ಮಾಡಲು ಬಳಸಲಾದ ಆ್ಯಂಬುಲೆನ್ಸ್ ಗಳು ತಮ್ಮ ಸಂಸ್ಥೆಗೆ ಸೇರಿದ್ದೇ ಅಥವಾ ಬೇರೆ ಯಾವುದೇ ಖಾಸಗಿ ಆಸ್ಪತ್ರೆಗೆ ಸೇರಿದ್ದೇ ಎಂದು ತಿಳಿಯುವ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News