‘ನಮಗೆ ಚಹಾ ಬೇಡ … ನ್ಯಾಯಬೇಕು’

Update: 2017-12-27 09:27 GMT

ಬೆಂಗಳೂರು, ಡಿ.27: ರಾಜಭವನಕ್ಕೆ ತೆರಳಿದ ರೈತ ಮುಖಂಡರಿಗೆ ರಾಜ್ಯಪಾಲರ ಭೇಟಿಗೆ ಅವಕಾಶ ನೀಡದಕ್ಕಾಗಿ ನೀಡಲಾದ ಚಹಾವನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ.

ನಮಗೆ ಚಹಾ ಬೇಡ.. ನ್ಯಾಯಬೇಕು. ರಾಜ್ಯಪಾಲರ ಭೇಟಿಯಾಗಿ ನಾವು ಅಲ್ಲಿಗೆ ತೆರಳಿದಾಗ ಅಪಾಯಿಟ್ ಮೆಂಟ್ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕಾಗಿ ನಮಗೆ ಭೇಟಿ ನಿರಾಕರಿಸಲಾಯಿತು.

ನಮಗೆ ರಾಜ್ಯಪಾಲರ ಭೇಟಿಗೆ ಅವಕಾಶ ನೀಡದ ಕಾರಣಕ್ಕಾಗಿ ಅಲ್ಲಿ  ನೀಡಲಾದ ಚಹಾ ಮತ್ತು ನೀರನ್ನು ನಾವು ತಿರಸ್ಕರಿಸಿರುವುದಾಗಿ ಹೋರಾಟಗಾರರ ನೇತೃತ್ವ ವಹಿಸಿರುವ ವೀರೇಶ್  ಸೊಬರದಮಠ ತಿಳಿಸಿದ್ದಾರೆ.

ನಾವು  ರಾಜ್ಯಪಾಲರನ್ನು ಖುದ್ದಾಗಿ  ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿದ್ದೆವು. ಆದರೆ ನಮ್ಮ ಮನವಿಯನ್ನು ರಾಜ್ಯಪಾಲರ ಕಾರ್ಯದರ್ಶಿ ರಮೇಶ್ ಸ್ವೀಕರಿಸಿದರು ಎಂದು ಮಾಹಿತಿ ನೀಡಿದರು.

ರಾಜಭವನದಿಂದ ಬಳಿಕ ರೈತರು ಚುನಾವಣಾ ಆಯೋಗದ ಕಚೇರಿಗೆ ತೆರಳಿದರು. ಮಹದಾಯಿ ವಿವಾದ ಬೆಗೆಹರಿಯುವ ತನಕ  ಚುನಾವಣೆ ನಡೆಸದಂತೆ ಆಗ್ರಹಿಸಿ ರೈತರು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News