ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಅಧಿಕಾರಿ

Update: 2017-12-31 11:46 GMT

ಬಣಕಲ್, ಡಿ, 31:  ರಸ್ತೆಯಲ್ಲಿ ಸಿಕ್ಕ ನಗದು, ಒಡವೆ ಮತ್ತು ಮೊಬೈಲ್ ಇದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪೊಲೀಸ್ ಅಧಿಕಾರಿಯೋರ್ವರು ಪ್ರಾಮಾಣಿಕತೆ ಮೆರದ ಘಟನೆ ಭಾನುವಾರ ಕೊಟ್ಟಿಗೆಹಾರದಲ್ಲಿ ನಡೆದಿದೆ.

  ಕೂವೆ ಸಮೀಪದ ಮಾವಿನಕಟ್ಟೆಯ ಚಿದಾನಂದ ಮತ್ತು ಲತಾ ದಂಪತಿಗಳು ಮೂಡಿಗೆರೆಯಿಂದ ಕೂವೆಗೆ ಬೈಕಿನಲ್ಲಿ ಹೋಗುತ್ತಿರುವಾಗ ಬಾಳೂರು ಸಮೀಪ ಹಣ, ಆಭರಣ ಮತ್ತು ಮೊಬೈಲ್ ಇದ್ದ ಬ್ಯಾಗನ್ನು ಬೀಳಿಸಿಕೊಂಡಿದ್ದರು.  ಅದೇ ಮಾರ್ಗವಾಗಿ ಬಾಳೂರು ಠಾಣೆಯ ಎಎಸ್‍ಐ ಹನುಮಂತಪ್ಪ ಕರ್ತವ್ಯ ಮುಗಿಸಿ ಕೊಟ್ಟಿಗೆಹಾರಕ್ಕೆ ಬರುತ್ತಿದ್ದರು. ಬಾಳೂರು ಸಮೀಪ ರಸ್ತೆಯಲ್ಲಿ ಬ್ಯಾಗ್ ಬಿದ್ದಿರುವುದನ್ನು ಕಂಡಿದ್ದು ಬ್ಯಾಗನ್ನು ತೆರೆದು ನೋಡಿದಾಗ ಚಿನ್ನಾಭರಣ, ನಗದು ಹಾಗೂ ಮೊಬೈಲ್ ಇರುವುದು ಕಂಡಿದೆ. ಬ್ಯಾಗ್‍ನಲ್ಲಿದ್ದ ಮೊಬೈಲ್‍ಗೆ ಮಾವಿನಕಟ್ಟೆಯ ಚಿದಾನಂದ ಅವರು ಕರೆ ಮಾಡಿದ್ದು ಅವರನ್ನು ಕೊಟ್ಟಿಗೆಹಾರಕ್ಕೆ ಬರಲು ಹೇಳಿ ಕೊಟ್ಟಿಗೆಹಾರದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಚಿದಾನಂದ ಮತ್ತು ಲತಾ ಅವರಿಗೆ ಎಎಸ್‍ಐ ಹನುಮಂತಪ್ಪ ಬ್ಯಾಗನ್ನು ಹಿಂದಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದ

  ಎಎಸ್‍ಐ ಹನುಮಂತಪ್ಪ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿಡಘಟ್ಟದ ರವಿ, ಸ್ಥಳೀಯರಾದ ವಿನಯ್, ದೇವರಾಜ್‍ಗೌಡ, ಆದರ್ಶ ಬಾಳೂರು, ನೆಕ್ಷಾ ಆದರ್ಶ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News