ಇಲ್ಲಿರುವುದು ಏಕೈಕ ಅಮ್ಮಾ, ಏಕೈಕ ಎಂಜಿಆರ್

Update: 2017-12-31 15:50 GMT

 ಚೆನ್ನೈ: ಎಐಎಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಸೂಪರ್‌ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶವನ್ನು ಟೀಕಿಸಿದ್ದಾರೆ. ಅಮ್ಮಾ ಎಂದು ಕರೆಯಲಾಗುತ್ತಿದ್ದ ಜಯಲಲಿತಾ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ಹೊಸ ಮುಖ ಕೂಡ ಅಮ್ಮಾ ನಿಷ್ಠಾವಂತರ ಮತ ಪಡೆಯಲು ಸಾಧ್ಯವಿಲ್ಲ. ಇಲ್ಲಿರುವುದು ಏಕೈಕ ಅಮ್ಮಾ ಹಾಗೂ ಏಕೈಕ ಎಂಜಿಆರ್. ಅಮ್ಮಾ ಹಾಗೂ ಎಂಜಿಆರ್‌ಗೆ ಯಾರನ್ನೂ ಹೋಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸ್ಪಷ್ಟ ಅಜೆಂಡಾ ಹೊಂದಿಲ್ಲದ ಅನಕ್ಷರಸ್ತ ವ್ಯಕ್ತಿ 

ರಜಿನಿಕಾಂತ್ ರಾಜಕೀಯ ಪ್ರವೇಶವನ್ನು ಬಿಜೆಪಿ ಸ್ವಾಗತಿಸಿದ ಹೊರತಾಗಿಯೂ ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ, ಸೂಪರ್‌ಸ್ಟಾರ್ ರಾಜಕೀಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸ್ಪಷ್ಟ ಅಜೆಂಡಾ ಹೊಂದಿಲ್ಲದ ಅನಕ್ಷರಸ್ತ ವ್ಯಕ್ತಿ ರಜಿನಿಕಾಂತ್ ಎಂದು ಅವರು ಟೀಕಿಸಿದ್ದಾರೆ. ಇನ್ನೋರ್ವ ಚಿತ್ರ ನಟ ರಾಜಕೀಯ ಪ್ರವೇಶಿಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ವ್ಯಂಗ್ಯವಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News