ಬಿಜೆಪಿಯಿಂದ ಸಂವಿಧಾನಕ್ಕೆ ಅಪಾಯ: ಲೋಕೇಶ್

Update: 2017-12-31 16:27 GMT

ದಾವಣಗೆರೆ, ಡಿ.31: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ದೇಶದ ಸಂವಿಧಾನಕ್ಕೆ ಅಪಾಯವಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಮಾನ ಮನಸ್ಕರ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕೆಂದು ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಪಿ.ವಿ. ಲೋಕೇಶ್ ಕರೆ ನೀಡಿದ್ದಾರೆ.

ನಗರದ ಅಶೋಕ ರಸ್ತೆಯ ಕಾ.ಪಂಪಾಪತಿ ಭವನದಲ್ಲಿ ರವಿವಾರ 17ನೇ ಜಿಲ್ಲಾ ಸಿಪಿಐ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸುಳ್ಳು ಭರವಸೆಗಳನ್ನು ನೀಡುವ ಮೂಲಕ ದೇಶದ 19 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ 2019ರ ವೇಳೆಗೆ ದೇಶದ ಎಲ್ಲ ರಾಜ್ಯಗಳಲ್ಲೂ ತನ್ನ ಅಧಿಪತ್ಯ ಸ್ಥಾಪಿಸಲು ಹೊರಟಿದೆ. ಇದಕ್ಕಾಗಿ ಮತೀಯ ಗಲಭೆ ಸೃಷ್ಠಿಸುವ, ರಾಜಕೀಯ ದಾಳಿ ನಡೆಸುವ, ಧಾರ್ಮಿಕ ವಿಚಾರಗಳನ್ನು ಕೆದಕಿ ಜನರನ್ನು ಪ್ರಚೋದಿಸುವ ಕೆಲಸಗಳನ್ನು ಮಾಡಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ರಾಜ್ಯದ 17 ಮಂದಿ ಬಿಜೆಪಿ ಸಂಸದರು 17 ಗ್ರಾಮ ಕೂಡ ಅಭಿವೃದ್ಧಿಪಡಿಸಿಲ್ಲ. ಇಂಥವರ ಕೈಗೆ ಮತ್ತೆ ರಾಜ್ಯದ ಆಡಳಿತದ ಚುಕ್ಕಾಣಿ ಹೋಗಬಾರದು ಎನ್ನುವುದೇ ಸಿಪಿಐ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಆನಂದರಾಜ್, ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ, ಪಕ್ಷದ ಮುಖಂಡ ಆವರೆಗೆರೆ ಚಂದ್ರು, ಟಿ.ಎಸ್.ನಾಗರಾಜ್, ಪಾಲಿಕೆ ಸದಸ್ಯ ಆವರಗೆರೆ ಉಮೇಶ್, ಮುಹಮದ್ ಬಾಷಾ, ಆವರೆಗೆರೆ ವಾಸು, ಗುಡಿಹಳ್ಳಿ ಹಾಲೇಶ್, ನಾಗರಾಜ್, ಶಾರದಮ್ಮ, ಪ್ರಸನ್ನಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News