ಅಂಬೇಡ್ಕರ್ ಅವರನ್ನು ಮಹಾನ್ ನಾಯಕನನ್ನಾಗಿ ನೋಡದೆ ಅವರ ಜಾತಿಯನ್ನು ಹುಡುಕಲಾಗುತ್ತಿದೆ: ಜ್ಞಾನಪ್ರಕಾಶ್ ಸ್ವಾಮೀಜಿ ಬೇಸರ

Update: 2018-01-01 15:35 GMT

ಮೈಸೂರು,ಜ.1: ಅಂಬೇಡ್ಕರ್ ಅವರನ್ನು  ಮಹಾನ್ ನಾಯಕನನ್ನಾಗಿ ನೋಡದೆ ಅವರ ಜಾತಿಯನ್ನು ಹುಡುಕುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ನಗರದ ಅಶೋಕಪುರಂ ಬಳಿ ಸೋಮವಾರ ಭೀಮಾ ಕೊರೆಂಗಾವ್ ಯುದ್ಧದ 200ನೇ ವರ್ಷದ ವಿಜಯೋತ್ಸವ ಹಾಗೂ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ವಿಶ್ವಕಂಡ ಅತ್ಯದ್ಭುತ ಮಹಾನ್ ನಾಯಕ. ಅವರು ಸಂವಿಧಾನವನ್ನು  ಕೇವಲ ದಲಿತರಿಗಾಗಿ ರಚನೆ ಮಾಡಿದ್ದಲ್ಲ. ಈ ದೇಶದ ಸಮಸ್ತ ಜನರಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಚನೆ ಮಾಡಿರುವುದು. ಆದರೆ ಕೆಲವರು ಅದನ್ನ ಬದಲಾಯಿಸಬೇಕು ಎಂದು ಹೇಳುತ್ತಿದ್ದಾರೆ. ಸಂವಿಧಾನದ ವಿಚಾರದಲ್ಲಿ ಕೈ ಹಾಕಿದರೆ ದೇಶ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಎಚ್ಚರಿಸಿದರು.

ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಬೇಕಿಲ್ಲ. ಆದರೆ ಅವರ ಜಾತಿಯನ್ನು ಹುಡುಕುವ ಕೆಲಸವನ್ನು ಮಾಡಲಾಗುತ್ತಿದೆ. ಅಂಬೇಡ್ಕರ್ ಸ್ವಾಭಿಮಾನದ ಸಿಂಹ. ತನ್ನ ಸ್ವಂತ ಮಗನ ಸಾವು ಸಂಭವಿಸಿದಾಗ ಹೆಣದ ಮೇಲೆ ಹೊದ್ದಿಸಲು ಬಿಳಿ ಬಟ್ಟೆ ತರಲು ಹಣ ಇರಲಿಲ್ಲ. ಇಂತಹ ಸಂದರ್ಭದಲ್ಲಿಯೂ ಸಹ ಯಾರ ಬಳಿಯೂ ಹಣಕ್ಕಾಗಿ ಕೈಚಾಚಿದವರಲ್ಲ ಎಂದು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News