ಬಣಕಲ್: ರಿವರ್‍ವ್ಯೂವ್ ಶಾಲೆಯಲ್ಲಿ ಹೊಸ ವರ್ಷದ ವಿಶಿಷ್ಟ ಸಂಭ್ರಮ

Update: 2018-01-02 11:11 GMT

ಬಣಕಲ್, ಜ.2:  ಇಲ್ಲಿನ ರಿವರ್‍ವ್ಯೂವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸ ವರ್ಷವನ್ನು ಶಿಕ್ಷಕರು ಮಕ್ಕಳ ಜೊತೆ ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಮುಖ್ಯ ಶಿಕ್ಷಕಿ ರಾಧಾಕಾರ್ಯಪ್ಪ ಹೊಸವರ್ಷದ ಕೇಕ್ ಕತ್ತರಿಸಿ ಮಾತನಾಡಿ, ಹೊಸವರ್ಷದ ಸಂಭ್ರಮ ಎಲ್ಲೆಡೆ ಪಾರ್ಟಿ ಮತ್ತಿತರ ಕಾರ್ಯಕ್ರಮ ಹಮ್ಮಿಕೊಂಡು ಆಚರಿಸುತ್ತಾರೆ. ಆದರೆ ಶಾಲೆಯ ಮಕ್ಕಳಿಗೆ ಹೊಸವರ್ಷದ ಸಂಭ್ರಮವು ಮನದಲ್ಲಿ ಮನೆಮಾಡಿರುತ್ತದೆ. ಆದರೆ ಅವರೊಂದಿಗೆ ಹೊಸವರ್ಷ ಅಚರಿಸಲು ಈ ಬಾರಿ ಶಾಲೆಯು ಹೊಸ ವರ್ಷದ ವಿಶೇಷ ಕೇಕ್ ತಂದು ಶಿಕ್ಷಕರ ಮತ್ತು ಮಕ್ಕಳ ಸಮ್ಮುಖದಲ್ಲಿ ಕತ್ತರಿಸಿ, ಸಿಹಿ ಹಂಚಿ, ಹೊಸ ವರ್ಷ ಸರ್ವರ ಜೀವನದಲ್ಲಿ ಹೊಸ ಬೆಳಕು ಚೈತನ್ಯ ನೀಡಲಿ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳೊಂದಿಗೆ  ಆಚರಿಸಿದ್ದೇವೆ ಎಂದರು.

ಶಾಲಾ ನಿರ್ಧೇಶಕ ಎ.ಸಿ.ಇಮ್ರಾನ್ ಮಾತನಾಡಿ, ಈ ಬಾರಿ ಹೊಸವರ್ಷದ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಯಾವುದೇ ನಿರುತ್ಸಾಹ ಉಂಟಾಗಬಾರದು ಎಂಬ ಅಂಶದೊಂದಿಗೆ ಮಕ್ಕಳಿಗೆ ಹೊಸ ವರ್ಷದ ಶುಭಾಶಯ ಕೋರಲು ಕೇಕ್ ಕತ್ತರಿಸಿ ಹೊಸವರ್ಷವನ್ನು ಸಿಹಿ ತಿನಿಸುವುದರೊಂದಿಗೆ ಶಿಕ್ಷಕರು ಮತ್ತು ಮಕ್ಕಳ ನಡುವೆ ಉತ್ತಮ ಗುರು ಭಾಂದವ್ಯ ಬೆಳೆಯಲಿ ಎಂದು ವಿನೂತನವಾಗಿ ಕಾರ್ಯಕ್ರಮ ನಡೆಸಲಾಯಿತು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News