ಆಧಾರ್ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಎಫ್‌ಐಆರ್

Update: 2018-01-05 03:47 GMT

ಹೊಸದಿಲ್ಲಿ, ಜ. 5: ಸೂರತ್ ಜಿಲ್ಲಾಡಳಿತ ಕಚೇರಿಯಲ್ಲಿ ವ್ಯಾಜ್ಯ ಪರಿಹಾರ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡು ವ್ಯಕ್ತಿಯ ಹೆಸರು ಮತ್ತು ಇತರ ವಿವರಗಳನ್ನು ಅನಧಿಕೃತವಾಗಿ ಪಡೆದ ಪ್ರಕರಣ ವಿರುದ್ಧ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಎಫ್‌ಐಆರ್ ದಾಖಲಿಸಿದೆ.

ವ್ಯಾಟ್ಸ್ಆ್ಯಪ್‌ನಲ್ಲಿ ಲಭ್ಯವಿರುವ ಏಜೆಂಟ್ ಒಬ್ಬನಿಗೆ ಯಾವುದೇ ಆಧಾರ್ ಮಾಹಿತಿ ವಿವರ ಲಭ್ಯವಾಗುವಂತೆ ಲಾಗ್ ಇನ್ ಐಡಿ ಮತ್ತು ಪಾಸ್‌ವರ್ಡ್ ಲಭ್ಯವಾಗುವಂತೆ ಅವಕಾಶ ನೀಡಲಾಗಿದೆ ಎಂದು ದ ಟ್ರಿಬ್ಯೂನ್ ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಈತನಿಗೆ 500 ರೂಪಾಯಿಯನ್ನು ಪೇಟಿಎಂ ಮೂಲಕ ಪಾವತಿಸಿದ್ದು, ಇದಕ್ಕೆ ಪ್ರತಿಯಾಗಿ ಹೆಸರು, ವಿಳಾಸ, ಅಂಚೆ ಕೋಡ್, ಭಾವಚಿತ್ರ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿವರಗಳು ಲಭ್ಯವಾಗುವಂತೆ ಮತ್ತು ಆಧಾರ್ ಕಾರ್ಡ್‌ನ ಮುದ್ರಿತ ಪ್ರತಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ವರದಿ ಹೇಳಿತ್ತು.

ಆದರೆ ಯುಐಡಿಎಐ ಇದನ್ನು ನಿರಾಕರಿಸಿತ್ತು. ಶೋಧನಾ ಸೌಲಭ್ಯವನ್ನು ವ್ಯಾಜ್ಯ ಪರಿಹಾರ ವ್ಯವಸ್ಥೆಯ ಉದ್ದೇಶಕ್ಕಾಗಿ ನಿಯೋಜಿತ ಅಧಿಕಾರಿ ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗಿದೆ. ಇದು ನಿರ್ದಿಷ್ಟವಾಗಿ ಪಂಚ್ ಮಾಡಲಾದ ಆಧಾರ್ ಕಾರ್ಡ್‌ಗಳಿಗೆ ಸೀಮಿತವಾಗಿರುತ್ತದೆ ಎಂದು ಸಮರ್ಥಿಸಿಕೊಂಡಿತ್ತು.

ವೈಯಕ್ತಿಕ ವಿವರಗಳನ್ನು ಬಯೋಮೆಟ್ರಿಕ್ಸ್ ಹೊರತಾಗಿ ಬೇರೆ ಯಾವುದೇ ವಿಷಯಗಳಿಗೆ ಬಳಕೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆಧಾರ್ ಮಾಹಿತಿ ಲಭ್ಯತೆ ವ್ಯವಸ್ಥೆಯನ್ನು ಖರೀದಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಾಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಲಾಗ್ ಇನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News