ಬಂಡೀಪುರ : ಹುಲಿಗಣತಿ ಕಾರ್ಯ ಪ್ರಾರಂಭ

Update: 2018-01-08 11:51 GMT

ಗುಂಡ್ಲುಪೇಟೆ,ಜ.8: ಬಂಡೀಪುರ ಹುಲಿಯೋಜನೆಯ ಎಲ್ಲಾ 12 ವಲಯಗಳಲ್ಲಿಯೂ ಹುಲಿಗಣತಿ ಕಾರ್ಯ ಪ್ರಾರಂಭವಾಯಿತು.ಬೆಳಗ್ಗೆ 6ರಿಂದಲೇ 105 ಬೀಟುಗಳಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ 60 ಸ್ವಯಂಸೇವಕರು ಗಣತಿಕಾರ್ಯ ಪ್ರಾರಂಭಿಸಿದರು. ಈ ಬಾರಿ ನಿಖರವಾಗಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಆಧುನಿಕ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ.

ಎಲ್ಲಾ ಗಣತಿದಾರರೂ ಪ್ರಾಧಿಕಾರದ ಹೊಸ ಇಕಾಲಾಜಿಕಲ್ ಆ್ಯಪ್ ಅನ್ನು ತಮ್ಮ ಆಂಡ್ರಾಯ್ಡ್ ಮೊಬೈಲಿನಲ್ಲಿ ಅಳವಡಿಸಿಕೊಂಡಿದ್ದು ಎದುರಾಗುವ ಹುಲಿ, ಮಾರ್ಗದಲ್ಲಿ ಮೂಡಿರುವ ಹೆಜ್ಜೆಗುರುತುಗಳು, ಹಿಕ್ಕೆ ಮುಂತಾದ ಗುರುತುಗಳ ಫೋಟೋ ತೆಗೆದು ಅಪ್ಲೋಡ್ ಮಾಡುತ್ತಾರೆ. ಇದರಿಂದ ಹುಲಿಗಳ ಸಂಖ್ಯೆಯನ್ನು ನಿಖರವಾಗಿ ಪ್ರಕಟಿಸಲಿದ್ದಾರೆ.
ಮೊದಲನೆಯ ದಿನ ನಡೆದ ಗಣತಿಯಲ್ಲಿ ಬಹುತೇಕ ಎಲ್ಲಾ ಮಾರ್ಗದಲ್ಲಿಯೂ ಕೆರೆಯಲ್ಲಿ ಮಲಗಿರುವ ಹುಲಿ, ಜಿಂಕೆ, ಕಾಟಿ ಹಾಗೂ ಆನೆಗಳ ಹಿಂಡು ಎದುರಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News