ಆಹಾರ ಮತ್ತು ಬಟ್ಟೆ ಅವರವರ ವೈಯಕ್ತಿಕ ವಿಚಾರ: ಸಿಎಂ

Update: 2018-01-09 12:22 GMT

ಮಡಿಕೇರಿ, ಜ. 9: ಹೆಲಿಕಾಪ್ಟರ್ ನಲ್ಲಿ ಮಡಿಕೇರಿಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ ಅವರನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ ಆರ್ ಸೀತಾರಾಮ್ ಹಾಗೂ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. 

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಚುನಾವಣೆ ಹತ್ತಿರ ಬಂದಿದೆ ಅಲ್ವಾ ಅದಕ್ಕೆ ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದು ಹೇಳೀದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಟ್ವಿಟರ್ ವಿಚಾರಕ್ಕೆ ಸಂಬಂಧಿಸಿದಂತೆ, ಆಹಾರ ಮತ್ತು ಬಟ್ಟೆ ಅವರವರ ವೈಯಕ್ತಿಕ ವಿಚಾರವಾಗಿದೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮ್ಯ 5 ಬಾರಿ ಅಲ್ಲಿಂದ ಗೆದ್ದಿದ್ದೇನೆ, ಕ್ಷೇತ್ರ ಬದಲಾವಣೆಯ ಪ್ರಶ್ನೆ ಇಲ್ಲ ಎಂದ ಅವರು ಅಲ್ಲಿ ಬನ್ನಿ ಇಲ್ಲಿ ಬನ್ನಿ ಅಂತ ಕರಿತಾರೆ ಅಲ್ಲಿಗೆಲ್ಲಾ ಹೋಗಿ ನಿಲ್ಲೋಕಾಗುತ್ತಾ, ಸುಮ್ಮನೆ ಕ್ಷೇತ್ರ ಬದಲಾವಣೆ ಉಹಾಪೋಹ ಹರಿದಾಡುತ್ತಿದೆ ಅಷ್ಟೇ ಎಂದರು. ಹಿಂಸಾಚಾರಕ್ಕೆ ಕೋಮುವಾದಿ ಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಯಾರೇ ಕೋಮುವಾದ ಮಾಡಿದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷ ನಾಯಕರ ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 5  ವರ್ಷಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳಿದರು. ರಾಜ್ಯ ಪ್ರವಾಸ ಸಂದರ್ಭ ನನ್ನ ನಿರೀಕ್ಷೆಗೂ ಮೀರಿದ ಜನ ಬೆಂಬಲ ಸಿಕ್ಕಿದೆ ಎಂದು ಮಡಿಕೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. 

ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವು ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News