ಹೆಲಿಕಾಪ್ಟರ್‌ನಿಂದ ಬಿದ್ದು ನಾಲ್ವರು ಯೋಧರಿಗೆ ಗಾಯ

Update: 2018-01-11 14:22 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ. 11: ಇಲ್ಲಿನ ಭಾರತೀಯ ಸೇನೆಯ ಪರೇಡ್ ಮೈದಾನದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್‌ನಿಂದ ಹಗ್ಗ ಬಳಸಿ ಕೆಳಗೆ ಇಳಿಯುವ ಸ್ಲಿದರಿಂಗ್ ಕಾರ್ಯಾಚರಣೆ ವೇಳೆ ಮೂವರು ಯೋಧರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

ಜನವರಿ 15ರಂದು ನಡೆಯಲಿರುವ ವಾರ್ಷಿಕ ಸೇನಾ ದಿನದ ಪರೇಡ್‌ನಲ್ಲಿ ಭಾಗವಹಿಸಲು ಲಘು ವಿಮಾನ ಧ್ರುವದಿಂದ ಯೋಧರು ಹಗ್ಗ ಬಳಸಿ ಇಳಿಯುವ ಸ್ಲಿದರಿಂಗ್ ಕಾರ್ಯಾಚರಣೆ ಅಭ್ಯಸಿಸುತ್ತಿದ್ದರು.

ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಹೆಲಿಕಾಪ್ಟರ್‌ನ ಭಾಗವೊಂದು ತುಂಡಾದ ಕಾರಣ ಯೋಧರು ಕೆಳಗೆ ಬಿದ್ದರು. ಇವರಲ್ಲಿ ಓರ್ವ ಯೋಧ ಗಂಭೀರ ಗಾಯಗೊಂಡಿದ್ದಾರೆ. ಆದರೆ, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News