ಚಲನಚಿತ್ರ ಘಟಕಗಳ ವಿಲೀನಕ್ಕೆ ವಾರ್ತಾ ಸಚಿವಾಲಯದ ಚಿಂತನೆ

Update: 2018-01-13 15:57 GMT

ಹೊಸದಿಲ್ಲಿ,ಜ.13: ತನ್ನ ವಿವಿಧ ಚಲನಚಿತ್ರ ಘಟಕಗಳನ್ನು ವಿಲೀನಗೊಳಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಯೋಜಿಸುತ್ತಿದ್ದು, ದಕ್ಷತೆಯನ್ನು ಹೆಚ್ಚಿಸಲು ತನ್ನ ಸಂಪನ್ಮೂಲಗಳ ಮರುಹೊಂದಾಣಿಕೆಯ ಉದ್ದೇಶದೊಂದಿಗೆ ಈ ಕ್ರಮಕ್ಕೆ ಮುಂದಾಗಿದೆ.

ಕಳೆದ ತಿಂಗಳು ಸಚಿವಾಲಯವು ತನ್ನ ಮೂರು ಇಲಾಖೆಗಳಾದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ(ಡಿಎಫ್‌ಪಿ), ಗೀತ ಮತ್ತು ನಾಟಕ ವಿಭಾಗ ಹಾಗೂ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ(ಡಿಎವಿಪಿ)ಗಳನ್ನು ಏಕೀಕೃತಗೊಳಿಸಿತ್ತು.

ಸಚಿವಾಲಯವು ಈಗ ತನ್ನ ಚಲನಚಿತ್ರ ಘಟಕಗಳಾದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್‌ಎಫ್‌ಡಿಸಿ), ಭಾರತೀಯ ಮಕ್ಕಳ ಚಲನಚಿತ್ರ ಸೊಸೈಟಿ (ಸಿಎಫ್‌ಎಸ್‌ಐ), ಚಲನಚಿತ್ರೋತ್ಸವ ನಿರ್ದೇಶನಾಲಯ(ಡಿಐಎಫ್‌ಎಫ್) ಮತ್ತು ಭಾರತೀಯ ಚಲನಚಿತ್ರ ವಿಭಾಗ(ಎಫ್‌ಡಿಐ)ಗಳನ್ನು ವಿಲೀನಗೊಳಿಸಲು ಉದ್ದೇಶಿಸಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News