ಮುದ್ದೇಬಿಹಾಳ: ಮೀನು ಹಿಡಿಯಲು ಹೋದ ವೇಳೆ ಅವಘಡ

Update: 2018-01-13 18:38 GMT

ಮುದ್ದೇಬಿಹಾಳ, ಜ.13: ಪಟ್ಟಣದ ಇಂದಿರಾ ವೃತ್ತದಲ್ಲಿರುವ ದೊಡ್ಡ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಬಾಲಕನೊಬ್ಬ ಕಾಲು ಜಾರಿಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮೃತ ಬಾಲಕನ ಶವವನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಆಶ್ರಯ ಕಾಲನಿ ನಿವಾ

ಸಿ 6ನೇ ತರಗತಿ ವಿದ್ಯಾರ್ಥಿ ಲೋಕೇಶ ನಾಗಪ್ಪಗಣಪಾ (12) ಎಂದು ಗುರುತಿಸಲಾಗಿದೆ. ಮೃತ ಬಾಲಕನ ಜೊತೆ ಇನ್ನೊಬ್ಬ ಬಾಲಕ ಮೀನು ಹಿಡಿಯುತ್ತಿದ್ದ ಎಂದು ಕೆಲ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಇನ್ನೊಬ್ಬ ಬಾಲಕನ ಶವಕ್ಕಾಗಿ ಸಂಜೆಯವರೆಗೂ ನುರಿತ ಈಜುಗಾರರು ಹುಡಕಾಟ ನಡೆಸಿದ್ದಾರೆ. ಕೆರೆ ದಂಡೆಯ ಮೇಲೆ ಒಂದು ಜೊತೆ ಚಪ್ಪಲಿ ಪತ್ತೆಯಾಗಿದೆ. ಆದರೆ ಪ್ರತ್ಯಕ್ಷದರ್ಶಿಗಳು ಇಬ್ಬರು ಬಾಲಕರಿದ್ದರು ಎಂದು ಹೇಳುತ್ತಿರುವುದರಿಂದ ಅಧಿಕಾರಿಗಳಲ್ಲಿ ಗೊಂದಲ ಮೂಡಿದೆ. ಘಟನೆಯ ಮಾಹಿತಿ ಪಡೆದ ಕೂಡಲೇ ಪುರಸಭೆ ಸದಸ್ಯ ಮಹಿಬೂಬ್ ಗೊಳಸಂಗಿ ಸ್ಥಳಕ್ಕೆ ದಾವಿಸಿ ಈಜುಗಾರರಿಗೆ ಸಹಕರಿಸಿದರು. ಪುರಸಭೆ ಅಧ್ಯಕ್ಷ ಬಸನ

ೌಡ ಪಾಟೀಲ, ಪುರಸಭೆ ಸದಸ್ಯ ಪಿಂಟೂ ಸಾಲಿಮನಿ, ಸಿಪಿಐ ರವಿಕುಮಾರ ಕಪ್ಪತ್ತನ್ನವರ್, ತಹಶೀಲ್ದಾರ್ ಎಂಎಎಸ್ ಬಾಗವಾನ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದರು. ಅಗ್ನಿಶಾಮಕ ಅಧಿಕಾರಿ ತರಾಟೆಗೆ: ಸೂಕ್ತ ರಕ್ಷಣಾ ಸಾಮಗ್ರಿಗಳಿಲ್ಲದೆ ಸ್ಥಳಕ್ಕೆ ಆಗಮಿಸಿದ್ದ ಅಗ್ನಿ ಶಾಮಕ ಠಾಣಾಧಿಕಾರಿಯನ್ನು ತಹಶೀಲ್ದಾರ್ ಎಂ.ಎಸ್.ಬಾಗವಾನ ಜನರ ಸಮ್ಮುಖವೇ ತೀವ್ರ ತರಾಟೆಗೆ ತೆಗೆದುಕೊಂಡರು. ಕೆರೆಯ ಆಳ ನೀರಲ್ಲಿ ಯಾರಾದರೂ ಮುಳಿಗಿದರೆ ಅವರನ್ನು ರಕ್ಷಿಸಲು ಏರ್‌ಬೋಟ್ ಅವಶ್ಯಕತೆ ಇದೆ. ಕಳೆದ ಎರಡು ವರ್ಷದಿಂದ ಏರ್‌ಬೋಟ್ ತರಿಸಿಕೊಳ್ಳುವಂತೆ ಹಲವು ಬಾರಿ ತಿಳಿಸಿದ್ದರೂ ಇದುವರೆಗೂ ಏರ್‌ಬೋಟ್ ಏಕೆ ತರಿಸಿಲ್ಲ ಎಂದು ಹರಿಹಾಯ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಬಾಗವಾನ, ಕೆರೆ ಪುರಸಭೆ ವ್ಯಾಪ್ತಿಗೆ ಬರುತ್ತದೆ. ಮಕ್ಕಳು ಕೆರೆ ದಂಡೆಯ ಮೇಲೆ ತಿರುಗಾಡದಂತೆ, ಮೀನು ಹಿಡಿಯಲು ತೆರಳದಂತೆ ಎಚ್ಚರಿಕೆ ವಹಿಸಬೇಕಾಗಿರುವು ಪುರಸಭೆ ಆಡಳಿತದ ಜವಾಬ್ದಾರಿ. ಈ ಬಗ್ಗೆ ಕ್ರಮ ಕೈಕೊಳ್ಳುವಂತೆ ಪುರಸಭೆಯವರಿಗೆ ತಿಳಿಸುವುದಾಗಿ ಹೇಳಿದರು.

50 ಸಾವಿರ ರೂ. ನೆರವು: ಭರವಸೆ

 ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದ ಬಾಲಕ ಲೋಕೇಶನ ಕುಟುಂಬಕ್ಕೆ ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ 50 ಸಾವಿರ ರೂ. ಸಹಾಯಧನ ಕೊಡುವುದಾಗಿ ತಿಳಿಸಿದ್ದು, ದೊಡ್ಡ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದರಿಂದ ಒಬ್ಬ ಕಾವಲುಗಾರನನ್ನು ನೇಮಿಸಬೇಕೆಂದು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನಾಪತ್ತೆಯಾದವರ ಕುರಿತು ಗೊಂದಲ

ಮೃತ ಬಾಲಕನೊಂದಿಗೆ ಇನ್ನೊಬ್ಬ ಬಾಲಕನೂ ಇದ್ದಿರುವುನ್ನು ಸ್ಥಳೀಯರು ನೋಡಿದ್ದಾರೆ. ಇವರಲ್ಲಿ ಒಬ್ಬ ಬಾಲಕನ ಶವ ದೊರಕಿದೆ. ಜೊತೆಗಿದ್ದವರು ಬಾಲಕನೋ, ಬಾಲಕಿಯೋ ಸ್ಪಷ್ಟವಾಗಿಲ್ಲ. ಶವ ದೊರೆತ ಮೇಲೆ ಖಚಿತ ಮಾಹಿತಿ ಗೊತ್ತಾಗುತ್ತದೆ ಎಂದು ಕಾರ್ಯಾಚರಣೆಗೆ ಸಹಕರಿಸಿದ ಪುರಸಭೆ ಸದಸ್ಯ ಮಹಿಬೂಬ್ ಗೊಳಸಂಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News