ರಾಮನಾಗಿ ರಾಹುಲ್, ರಾವಣನಾಗಿ ಮೋದಿ!

Update: 2018-01-15 08:41 GMT

ಲಕ್ನೋ, ಜ.15: ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಹುಲ್ ಗಾಂಧಿ ಇಂದು ತಮ್ಮ ಲೋಕಸಭಾ ಕ್ಷೇತ್ರವಾದ ಅಮೇಠಿಗೆ ಭೇಟಿ ನೀಡಲಿದ್ದಾರೆ. ಆದರೆ ಅಷ್ಟರೊಳಗಾಗಿಯೇ ಅವರನ್ನು ಶ್ರೀರಾಮನಂತೆ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ರಾವಣನಂತೆ ಬಿಂಬಿಸುವ ಪೋಸ್ಟರ್ ಗಳು ಅಮೇಠಿ ಜಿಲ್ಲೆಯ ವಿವಿಧೆಡೆಗಳಲ್ಲಿ ಕಾಣಿಸಿಕೊಂಡಿವೆ.

"ರಾಹುಲ್ ಅವರು ದೇಶದಲ್ಲಿ ರಾಮ ರಾಜ್ಯ ಸ್ಥಾಪಿಸಿ ಬಿಜೆಪಿಯ ದುರಾಡಳಿತಕ್ಕೆ ಅಂತ್ಯ ಹಾಡಲಿದ್ದಾರೆ'' ಎಂದು ಈ ಪೋಸ್ಟರುಗಳಲ್ಲಿ ಬರೆಯಲಾಗಿದೆ. ಈ ಪೋಸ್ಟರುಗಳನ್ನು ಸ್ಥಳೀಯ ಕಾಂಗ್ರೆಸಿಗ ಅಭಯ್ ಶುಕ್ಲಾ ಹಾಕಿಸಿದ್ದಾರೆಂಬ ಮಾಹಿತಿಯಿದೆ. ಈ ಪೋಸ್ಟರ್ ಗಳು ಅಧಿಕೃತವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಹೇಳಿದ್ದಾರಾದರೂ  ಅದರಲ್ಲಿ ಆಕ್ಷೇಪಾರ್ಹವೆನಿಸುವಂತಹುದ್ದೇನೂ ಇಲ್ಲ ಎಂಬುದು ಅವರ ವಾದವಾಗಿದೆ.

"ತಮ್ಮ ನಾಯಕರ ಬಗ್ಗೆ ಜನರು ಹಾಗೂ ಮತದಾರರು ಅವರದ್ದೇ ಆದ ಭಾವನೆಗಳನ್ನು ಹೊಂದಿದ್ದಾರೆ'' ಎಂದು ಕಾಂಗ್ರೆಸ್ಸಿಗರೊಬ್ಬರು ಹೇಳಿಕೊಂಡಿದ್ದಾರೆ. 2019ರ ಚುನಾವಣೆಯಲ್ಲಿ ರಾಹುಲ್ ಅವರು ಮೋದಿ ಸರಕಾರವನ್ನು ಸೋಲಿಸಲಿದ್ದಾರೆಂಬ ಆತ್ಮವಿಶ್ವಾಸ ಅವರದ್ದು.

ಇಂದು ಅಮೇಠಿಗೆ ಆಗಮಿಸಲಿರುವ ರಾಹುಲ್ ರಾಯ್ ಬರೇಲಿಗೆ ತೆರಳಲಿದ್ದು ನಾಳೆ ಅಮೇಠಿಯಲ್ಲ ಸಾರ್ವಜನಿಕರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುವ ಕಾರ್ಯಕ್ರಮವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News