ಉಚಿತ ತರಬೇತಿ

Update: 2018-01-16 14:51 GMT

ಮಂಗಳೂರು, ಜ.16: ದ.ಕ ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಊಟ, ವಸತಿ ಹಾಗೂ ಮಾಸಿಕ ರೂ. 500 ಶಿಷ್ಯ ವೇತನದೊಂದಿಗೆ ಬೇಸಿಕ್ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲಿಷ್ ಹಾಗೂ ವಿವಿಧ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗವಕಾಶ ಕಲ್ಪಿಸುವುದನ್ನು ಕೇಂದ್ರೀಯ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಮೈಸೂರಿನಲ್ಲಿ ಆಯೋಜಿಸಿದೆ.

ತರಬೇತಿಯು 6 ತಿಂಗಳಾಗಿದ್ದು, ತರಬೇತಿಗೆ ಎಸೆಸೆಲ್ಸಿ ಹಾಗೂ ಪಿಯುಸಿ, ಐಟಿಐ ಡಿಪ್ಲೊಮಾ, ಪದವಿ ಶಿಕ್ಷಣ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಕನಿಷ್ಠ ವಯಸ್ಸು 18 ರಿಂದ 35 ಆಗಿರಬೇಕು. ಅಭ್ಯರ್ಥಿಗಳು ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಆಧಾರ್ ಕಾರ್ಡ್, ಭಾವಚಿತ್ರ 5 ಮೂಲ ದಾಖಲಾತಿಗಳೊಂದಿಗೆ ಜ.24ರಂದು ನೇರ ಆಯ್ಕೆಯಲ್ಲಿ ಪಾಲ್ಗೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2510618, ಮೊಬೈಲ್ 9632688884 ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News