ಭಾರತದ ಸಂಶೋಧನಾ ಪ್ರಬಂಧಗಳಲ್ಲಿ ಬಹುಪಾಲು ನಕಲು ಹೊಡೆದುದ್ದು: ಕೇಂದ್ರ ಸಚಿವ ಅಲ್ಫೋನ್ಸ್

Update: 2018-01-17 11:50 GMT

ಕೊಚ್ಚಿ, ಜ.17: ಭಾರತದಲ್ಲಿ ಮಂಡಿಸಲಾಗುತ್ತಿರುವ ಸಂಶೋಧನಾ ಪ್ರಬಂಧಗಳಲ್ಲಿ ಶೇ. 90ರಷ್ಟು ನಕಲು ಹೊಡೆದದ್ದಾಗಿದೆ ಎಂದು ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂದಾನಂ ಹೇಳಿದ್ದಾರೆ.  ಕೇಂದ್ರ ಸಮುದ್ರಮೀನು ಸಂಶೋಧನಾ ಸಂಸ್ಥೆ(ಸಿಎಂಎಫ್‍ಆರ್‍ಐ) ಆಯೋಜಿಸಿದ್ದ ಎರಡನೆ ಅಂತಾರಾಜ್ಯ ಸಫಾರಿ ಸಮ್ಮೇಳನದಲ್ಲಿ ಅವರು ಮಾತಾಡುತ್ತಿದ್ದರು. ಒಂಬತ್ತು  ರಾಜ್ಯಗಳ ಸಂಶೋಧಕರ ಉಪಸ್ಥಿತಿಯಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಹಿಂದೆಲ್ಲ ಉನ್ನತ ಗುಣಮಟ್ಟವನ್ನು ಹೊಂದಿದ ಸಂಶೋಧನೆಗಳು ಆಗಿವೆ.

ಹಸಿರು ಕ್ರಾಂತಿಯ ನಂತರ ಯಾವುದೇ ಸಂಶೋಧನೆ ಕೃಷಿ ಕ್ಷೇತ್ರದಲ್ಲಿ ಆಗಿಲ್ಲ. ಪ್ರಬಂಧಗಳ ನಕಲು ಹೊಡೆಯುವಿಕೆ ತಡೆಯುವುದು ಮತ್ತು ಪುನರಾವರ್ತನೆಯಾಗದಂತೆ ಸಹಾಯಕವಾದ ಸಾಫ್ಟ್‍ವೇರ್ ಬಳಕೆಯಾಗುತ್ತಿದೆಯೇ ಎಂದು ಚಿಂತನೆ ನಡೆಯಬೇಕಿದೆ. ಎಲ್ಲ ಸಂಶೋಧನೆಗಳುಜನರ ಜೀವ ರಕ್ಷಣೆಗೆ, ಜೀವನಮಟ್ಟ ಸುಧಾರಿಸಲು ಉಪಯುಕ್ತವಾಗಬೇಕಿದೆ ಎಂದು ಕಣ್ಣಂದಾನಂ ಹೇಳಿದ್ದಾರೆ.

ಓಖಿ ದುರಂತದಲ್ಲಿ ಬಲಿಯಾದವರ ಕುರಿತು ಈಗಲೂ ಸರಿಯಾದ ಲೆಕ್ಕ ಸಿಕ್ಕಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದುರಂತವನ್ನು ಮೊದಲೇ ನಿರೀಕ್ಷಿಸುವಲ್ಲಿ ಮತ್ತು ವೈಜ್ಞಾನಿಕ ವಿವರಗಳನ್ನು ಸಂಗ್ರಹಿಸುವಲ್ಲಿ ಲೋಪವಾಗಿದೆಯೇ ಎನ್ನುವ ತನಿಖೆ ನಡೆಯಬೇಕಾಗಿದೆ. ಇಂತಹ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ  ಆರೋಪ,ಪ್ರತ್ಯಾರೋಪ ಹೊರಿಸುವ ಬದಲಾಗಿ ದುರಂತಗಳನ್ನು ಎದುರಿಸಲು ತಂತ್ರಜ್ಞಾನದ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕಾಗಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News