ತರಕಾರಿ ಮಾರುಕಟ್ಟೆಗಳನ್ನು ನಿರ್ಮಿಸಿ

Update: 2018-01-17 18:40 GMT

ಮಾನ್ಯರೇ,

ರಾಜ್ಯದಲ್ಲಿನ ನೂರಾರು ತಾಲೂಕು ಮತ್ತು ಹೋಬಳಿ ಮಟ್ಟದ ನಗರ ಪ್ರದೇಶಗಳಲ್ಲಿ ಸುವ್ಯವಸ್ಥಿತವಾದ ತರಕಾರಿ ಮಾರುಕಟ್ಟೆಗಳು ಇಲ್ಲ. ಇದರಿಂದಾಗಿ ತರಕಾರಿ ಮಾರುವ ರೈತರು ಮತ್ತು ವ್ಯಾಪಾರಿಗಳು ನಿತ್ಯ ತೊಂದರೆ ಎದುರಿಸುತ್ತಿದ್ದು, ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ರಸ್ತೆಗಳ ಬದಿಯಲ್ಲಿ ಇರಿಸಿಕೊಂಡು ಮಾರಾಟ ಮಾಡಬೇಕಾಗಿದೆ. ರಸ್ತೆ ಪಕ್ಕದಲ್ಲಿರುವ ಚರಂಡಿಯ ಕೊಳಚೆ ನೀರು ಮತ್ತು ಮಲ ಮೂತ್ರದ ದುರ್ವಾಸನೆ ದಿನವಿಡೀ ಇವರು ಸೇವಿಸಬೇಕಾಗಿದೆ. ಅಲ್ಲದೆ ತರಕಾರಿ ಹಾಗೂ ಹಣ್ಣು ಹಂಪಲುಗಳ ಮೇಲೆ ಚರಂಡಿ ಮತ್ತು ಶೌಚಾಲಯದಲ್ಲಿನ ಸೊಳ್ಳೆಗಳು ಬಂದು ಕುಳಿತುಕೊಳ್ಳುತ್ತವೆ. ಇವುಗಳನ್ನು ಕೊಳ್ಳುವ ಗ್ರಾಹಕರ ಆರೋಗ್ಯದ ಮೇಲೆಯೂ ಇದು ದುಷ್ಪರಿಣಾಮ ಬೀರುತ್ತದೆ. ಇನ್ನೊಂದೆಡೆ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವುದರಿಂದ ವಾಹನ ಸವಾರರಿಗೂ ತೊಂದರೆ ಉಂಟಾಗುತ್ತಿದೆ.
ವರ್ಷಕ್ಕೆ ಲಕ್ಷಾಂತರ ರೂ. ತೆರಿಗೆ ಹಣ ಪಾವತಿಸುತ್ತಿದ್ದರೂ ಹೆಚ್ಚಿನ ಕಡೆ ಸುವ್ಯವಸ್ಥಿತ ಮಾರುಕಟ್ಟೆ ನಿರ್ಮಿಸಿ ಕೊಡುವಲ್ಲಿ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಕೆಲವೆಡೆ ಮಾರುಕಟ್ಟೆ ನಿರ್ಮಾಣಕ್ಕಾಗಿ ಹಲವು ಬಾರಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನಾದರೂ ಸಂಬಂಧಿತ ಅಧಿಕಾರಿಗಳು ಹಾಗೂ ಆಯಾ ಭಾಗದ ಜನಪ್ರತಿನಿಧಿಗಳು ಈ ಸಮಸ್ಯೆಯ ಕುರಿತು ಗಮನ ಹರಿಸಿ ರಾಜ್ಯದೆಲ್ಲೆಡೆ ಸುವ್ಯವಸ್ಥಿತ ತರಕಾರಿ ಮಾರುಕಟ್ಟೆಗಳನ್ನು ನಿರ್ಮಿಸಿ, ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಪರದಾಟದಿಂದ ತಪ್ಪಿಸಬೇಕಾಗಿದೆ.

Writer - ಮೌಲಾಲಿ ಕೆ. ಆಲಗೂರ, ಸಿಂದಗಿ

contributor

Editor - ಮೌಲಾಲಿ ಕೆ. ಆಲಗೂರ, ಸಿಂದಗಿ

contributor

Similar News