ಮಾನವ ಹಕ್ಕು ವಿಚಾರಗಳಲ್ಲಿ ಟ್ರಂಪ್ 'ವಿನಾಶಕಾರಿ': ಹ್ಯೂಮನ್ ರೈಟ್ಸ್ ವಾಚ್ ಮುಖ್ಯಸ್ಥ

Update: 2018-01-19 06:15 GMT

ಪ್ಯಾರಿಸ್, ಜ.19: ಮಾನವ ಹಕ್ಕು ವಿಚಾರಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ವರ್ಷದ ಆಡಳಿತದ ಸಾಧನೆ ‘ವಿನಾಶಕಾರಿ’ಯಾಗಿದೆಯಲ್ಲದೆ ಅದು ಚೀನಾದಿಂದ ರಷ್ಯಾ ತನಕ ಎಲ್ಲಾ ಸರ್ವಾಧಿಕಾರಿ ನಾಯಕರಿಂದ ದೌರ್ಜನ್ಯಗಳನ್ನು ಉತ್ತೇಜಿಸಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ಮುಖ್ಯಸ್ಥ ಕೆನ್ನೆತ್ ರೊಥ್ ಹೇಳಿದ್ದಾರೆ.

ಪ್ಯಾರಿಸ್ ನಗರದಲ್ಲಿ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆಗೊಳಿಸುವ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘‘ಪ್ರಜಾತಂತ್ರ ಮೌಲ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜನರನ್ನು ಆಲಂಗಿಸುವ ದೊಡ್ಡ ಬಯಕೆ ಅವರಿಗಿರುವುದರಿಂದಲೇ ಟ್ರಂಪ್ ಅವರು ಮಾನವ ಹಕ್ಕು ಆಂದೋಲನದ ಪಾಲಿಗೆ ವಿಪತ್ಕಾರಿಯಾಗಿದ್ದಾರೆ’’ ಎಂದು ಹೇಳಿದರು.

‘‘ತಾವೇ ಮಾನವ ಹಕ್ಕು ರಕ್ಷಿಸಬಹುದೆಂದು ಟ್ರಂಪ್ ಅಂದುಕೊಂಡಿದ್ದಾರೆ. ಇದೇ ಕಾರಣದಿಂದ ಮಾನವ ಹಕ್ಕು ಆಂದೋಲನಕ್ಕೆ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವುದು ಇನ್ನಷ್ಟು ಕಷ್ಟಕರವಾಗತ್ತಿದೆ’’ ಎಂದು ಅವರು ಹೇಳಿದರು.

ಬ್ರಿಟನ್ ಬ್ರೆಕ್ಸಿಟ್ ನಿಂದ ಹೊರ ಬಂದಿರುವುದರಿಂದ ಹಾಗೂ ಅಮೆರಿಕ ಮಾನವ ಹಕ್ಕು ಕ್ಷೇತ್ರದಿಂದಲೇ ಹೆಚ್ಚಾಗಿ ಗೈರಾಗಿರುವುದರಿಂದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಅವರು ಮಾನವ ಹಕ್ಕು ಕ್ಷೇತ್ರದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುವುದು ಎಂದೂ ರೊಥ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News