5 ವರ್ಷಗಳಲ್ಲಿ ಕೇರಳದ ಜೈಲುಗಳಲ್ಲಿ ಮೃತಪಟ್ಟವರೆಷ್ಟು ಗೊತ್ತಾ ?

Update: 2018-01-19 09:38 GMT

ಕೊಚ್ಚಿ, ಜ.19: ಐದು ವರ್ಷಗಳಲ್ಲಿ  ರಾಜ್ಯದ ವಿವಿಧ ಜೈಲುಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆಂದು ಕೇರಳ  ಸರಕಾರ ಹೈಕೋರ್ಟ್ ತಿಳಿಸಿದೆ. ಸುಪ್ರೀಂಕೋರ್ಟಿನ ಜೈಲು ಸುಧಾರಣೆ ನಿರ್ದೇಶಗಳಡಿಯಲ್ಲಿ ಕೇರಳ  ಹೈಕೋರ್ಟು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ2011 ರಿಂದ 2016ರವರಿಗಿನ ಅವಧಿಯಲ್ಲಿ ಜೈಲಿನೊಳಗೆ ಮೃತಪಟ್ಟಿರುವವರ ಲೆಕ್ಕವನ್ನು ತಿಳಿಸಲಾಗಿದೆ.

ಅಸಹಜ ಸಾವೆಂದು ಎಲ್ಲ ಘಟನೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೃತಪಟ್ಟವರಲ್ಲಿ ಕೆಲವರ ಸಂಬಂಧಿಕರಿಗೆ ನಷ್ಟ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ಸರಕಾರದ ವಕೀಲರು ಹೈಕೋರ್ಟಿಗೆ ತಿಳಿಸಿದ್ದಾರೆ. ಈ ವಿಷಯಗಳನ್ನು ಕೂಡಾ ಸೇರಿಸಿ  ಹತ್ತು ದಿವಸದೊಳಗೆ ವಿವರವಾದ ಅಫಿದಾವಿತ್ ಸಲ್ಲಿಸಬೇಕೆಂದು ಅದು ಸರಕಾರಕ್ಕೆ ಸೂಚಿಸಿದೆ.

2012ರ ನಂತರ ಜೈಲಿನೊಳಗಿರುವಾಗಲೇ ಅಸಹಜ ಸಾವಿಗೀಡಾದವರ ಸಂಬಂಧಿಕರಿಗೆ ನಷ್ಟ ಪರಿಹಾರ ನೀಡಲು ಹೈಕೋರ್ಟ್ ಗಳು ಸ್ವಪ್ರೇರಣೆಯಿಂದ ಕ್ರಮ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಪೊಲೀಸ್ ದೌರ್ಜನ್ಯ, ಕಸ್ಟಡಿ ಸಾವು ಮುಂತಾದ ಘಟನೆಗಳನ್ನು ತಡೆಯಬೇಕೆಂದು ಆಗ್ರಹಿಸಿ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ಆರ್‍ಸಿ ಲಹೋಟ್ಟಿ ಬರೆದ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿಸಿ ಕ್ರಮಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News