ಪಶ್ಚಿಮ ಬಂಗಾಳದಲ್ಲಿ 8 ರೈಲುಗಳ ಓಡಾಟ ರದ್ದು !

Update: 2018-01-21 05:52 GMT

ಕೋಲ್ಕತಾ, ಜ.21: ಪಶ್ಚಿಮ ಬಂಗಾಳದಲ್ಲಿ ಭಾರಿ ನಷ್ಟದ ಕಾರಣದಿಂದಾಗಿ 8 ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲು ರೈಲ್ವೇ ಇಲಾಖೆ ನಿರ್ಧಾರ ಕೈಗೊಂಡಿದೆ.

ಸೋನಾರ್ಪುರ್-ಕ್ಯಾನ್ನಿಂಗ್, ಶಾಂತಿಪುರ್-ನಬದ್ವೀಪ್ ಘಾಟ್, ಬಾರಾಸತ್-ಹಸ್ನಾಬಾದ್, ಕಲ್ಯಾಣಿ-ಕಲ್ಯಾಣಿ ಸಿಮಾಂತಾ, ಬ್ಯಾಲಿಗುಂಜ್-ಬಡ್ಜ್ ಬಡ್ಜ್, ಬರುಯಿಪುರ್-ನಂಖಾನ, ಬರ್ಧ್ಮನ್-ಕತ್ವಾ ಮತ್ತು ಭಿಮ್ಗರ್-ಪಲಾಸ್ತಿಲಿ ರೈಲುಗಳ ಸೇವೆಯನ್ನು ಸ್ಥಗಿತೊಳಿಸಲು ನಿರ್ಧರಿಸಲಾಗಿದೆ.

ರಾಜ್ಯ ಸರಕಾರ ಶೇ 50 ಖರ್ಚನ್ನು ಭರಿಸದೇ ಇದ್ದಲ್ಲಿ ಈ ಎಂಟು ರೈಲುಗಳ ಸೇವೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ರೈಲ್ವೆತಿಳಿಸಿದೆ. ಪಶ್ಚಿಮ ಬಂಗಾಳ ರಾಜ್ಯ ಸರಕಾರಕ್ಕೆ ಈ ವಿಚಾರ ತಿಳಿಸಿದ್ದರೂ, ರಾಜ್ಯ ಸರಕಾರ  ಮೌನ ವಹಿಸಿದೆ ಎಂದು  ಪೂರ್ವ ರೈಲ್ವೇ  ಆರೋಪಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈಲ್ವೇಯ ನಿರ್ಧಾರದ  ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. "ರೈಲ್ವೇ ಇಲಾಖೆಯು   ಪಶ್ಚಿಮ ಬಂಗಾಳದ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದೆ. ಈ ಕ್ರಮವನ್ನು ನಾವು ಬಲವಾಗಿ ವಿರೋಧಿಸುತ್ತೇವೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News