ಮಹಿಳೆಯ ಒಪ್ಪಿಗೆಯಿಲ್ಲದೆ ಯಾರೂ ಕೂಡ ಆಕೆಯನ್ನು ಮುಟ್ಟುವಂತಿಲ್ಲ: ದಿಲ್ಲಿ ಹೈಕೋರ್ಟ್

Update: 2018-01-21 09:44 GMT

ಹೊಸದಿಲ್ಲಿ, ಜ.21: ಮಹಿಳೆಯ ಒಪ್ಪಿಗೆಯಿಲ್ಲದೆ ಯಾರೊಬ್ಬರೂ ಕೂಡ ಆಕೆಯನ್ನು ಮುಟ್ಟುವಂತಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದ್ದು, ನಿರಂತರವಾಗಿ ಮಹಿಳೆ ದೌರ್ಜನ್ಯಕ್ಕೊಳಗಾಗುತ್ತಿರುವುದು ದುರದೃಷ್ಟಕರ ಎಂದಿದೆ.

9 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದ ಸಂದರ್ಭ ನ್ಯಾಯಾಲಯವು ಮಹಿಳೆಯರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತು.

2014ರಲ್ಲಿ ಉತ್ತರ ದಿಲ್ಲಿಯ ಜನನಿಬಿಡ ಮಾರುಕಟ್ಟೆಯಲ್ಲಿ ಬಾಲಕಿಯೊಬ್ಬಳನ್ನು ಅಸಭ್ಯವಾಗಿ ಸ್ಪರ್ಶಿಸಿದ ಉತ್ತರ ಪ್ರದೇಶದ ನಿವಾಸಿ ಚಾವಿ ರಾಮ್ ಗೆ ನ್ಯಾಯಾಲಯವು 5 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.

ಮಹಿಳೆಯ ದೇಹವು ಆಕೆಯ ಸ್ವಂತದ್ದಾಗಿದೆ ಹಾಗು ಅದರ ಮೇಲೆ ಆಕೆಗೆ ಹಕ್ಕಿದೆ. ಅವಳೊಬ್ಬಳನ್ನು ಬಿಟ್ಟು ಯಾವುದೇ ಉದ್ದೇಶದಿಂದ ಆಕೆಯ ಅನುಮತಿಯಿಲ್ಲದೆ ಯಾರೊಬ್ಬರೂ ಮಹಿಳೆಯ ದೇಹವನ್ನು ಮುಟ್ಟುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News