ನ್ಯಾ.ಲೋಯಾ ಸಾವಿನ ಪ್ರಕರಣದ ಕುರಿತು ಯಾವುದೇ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲು ಅವಕಾಶ ನೀಡಬೇಡಿ : ಸುಪ್ರೀಂ

Update: 2018-01-22 11:35 GMT

ಹೊಸದಿಲ್ಲಿ, ಜ. 22: ಬಾಂಬೆ ಉಚ್ಚ  ನ್ಯಾಯಾಲಯದಲ್ಲಿರುವ ಸಿಬಿಐ ನ್ಯಾಯಮೂರ್ತಿ ಬಿ.ಎಚ್. ಲೋಯಾ ಅವರ ಸಂಶಯಾಸ್ಪದ ಸಾವಿನ ಎರಡು ಪ್ರಕರಣದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ತಾನೇ ಕೈಗೆತ್ತಿಕೊಳ್ಳಲಿದೆ.

 ಬಾಂಬೆ ಉಚ್ಚ ನ್ಯಾಯಾಲಯದಿಂದ ಈ ಪ್ರಕರಣಗಳನ್ನು ವರ್ಗಾಯಿಸಿ ಕೊಂಡಿರುವ ಸರ್ವೋಚ್ಚ ನ್ಯಾಯಾಲಯ, ಲೋಯಾ ಸಾವಿನ ಕುರಿತು ಯಾವುದೇ ಸಾರ್ವಜನಿಕ ಹಿತಾಸಕ್ತಿ ದಾವೆ ಸ್ವೀಕರಿಸಿದಂತೆ ಇತರ ಉಚ್ಚ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ ಹಾಗೂ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ನಿಗದಿಗೊಳಿಸಿದೆ.

 ನ್ಯಾಯಮೂರ್ತಿ ಲೋಯಾ ಅವರ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಮಹಾರಾಷ್ಟ್ರ ಸರಕಾರ ಸಲ್ಲಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯ, ಪ್ರಸಕ್ತ ಅರ್ಜಿ ಎತ್ತಿರುವ ವಿಚಾರಗಳು ಗಂಭೀರ ಹಾಗೂ ನಾವು ಎಲ್ಲಾ ದಾಖಲೆಗಳನ್ನು ಬಹುಮಟ್ಟಿಗೆ ಗಂಭೀರತೆಯಿಂದ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದೆ.

 ನ್ಯಾಯಮೂರ್ತಿ ಲೋಯ ಅವರ ಸಾವಿಗೆ ಸಂಬಂಧಿಸಿದ ಯಾವುದೇ ದಾಖಲೆಗಳಿದ್ದರೆ ಸಲ್ಲಿಸುವಂತೆ ಅರ್ಜಿದಾರರಿಗೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದೆ.

ಲೋಯಾ ಅವರ ಸಾವಿನ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಬಾಂಬೈ ವಕೀಲ ಸಂಘಟನೆ (ಬಿಎಲ್‌ಎ) ಜನವರಿ 8ರಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿತ್ತು.

 ಮಹಾರಾಷ್ಟ್ರ ಸರಕಾರ ಸಲ್ಲಿಸಿದ ದಾಖಲೆಗಳು ಅಸಂಪೂರ್ಣ ಎಂದು ಬಿಎಲ್‌ಎ ನ್ಯಾಯವಾದಿ ದುಷ್ಯಂತ ದವೆ ತಿಳಿಸಿದ್ದಾರೆ. ಲೋಯಾ ಅವರ ಸಾವಿನ ಸುತ್ತ ಸಂಶಯಾಸ್ಪದ ಸನ್ನಿವೇಶಗಳು ಇವೆ ಎಂಬ ದಾಖಲೆಗಳನ್ನು ತಾನು ಸಾರ್ವಜನಿಕ ಮಾಹಿತಿ ಹಕ್ಕು ಅಡಿಯಲ್ಲಿ ಪಡೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

2014 ಡಿಸೆಂಬರ್ 1ರಂದು ಲೋಯಾ ಅವರ ಹತ್ಯೆಯಾಗಿದ್ದು, ಈ ಸಂದರ್ಭ ಅವರು ಇತರ ಹಲವರೊಂದಿಗೆ ಬಿಜೆಪಿ ವರಿಷ್ಠ ಅಮಿತ್ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಅನಂತರ ಅಮಿತ್ ಶಾ ಈ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರು.

ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರವನ್ನು ನ್ಯಾಯವಾದಿ ಹರೀಶ್ ಸಾಳ್ವೆ ಪ್ರತಿನಿಧಿಸಿದ್ದರು.

ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಾಳ್ವೆ ಅವರು ಅಮಿತ್ ಶಾ ಅವರ ನ್ಯಾಯವಾದಿ. ಆದುದರಿಂದ ಅವರು ಮಹಾರಾಷ್ಟ್ರ ಸರಕಾರದ ಪರವಾಗಿ ಹಾಜರಾಗಲು ಸಾಧ್ಯವಿಲ್ಲ.

ದುಶ್ಯಂತ್ ದವೆ, ನ್ಯಾಯವಾದಿ,

ಬಾಂಬೆ ನ್ಯಾಯವಾದಿಗಳ ಸಂಘಟನೆ (ಬಿಎಲ್‌ಎ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News