ಕೊಡಿಂಞಿ ಫೈಝಲ್ ಕುಟುಂಬಕ್ಕೆ ಮನೆ ಹಸ್ತಾಂತರ

Update: 2018-01-23 09:27 GMT

ತಿರೂರಂಗಾಡಿ,ಜ.23: ಇಸ್ಲಾಂಗೆ ಮತಾಂತರಗೊಂಡದ್ದಕ್ಕಾಗಿ ಆರೆಸ್ಸೆಸ್ ಕಾರ್ಯಕರ್ತರಿಂದ ಕೊಲೆಗೀಡಾದ ಕೊಡಿಂಞಿ ಪುಲ್ಲಾಣಿ ಫೈಝಲ್‍ರ ಕುಟುಂಬಕ್ಕೆ ಮೊಹಲ್ಲಾ ಕಮಿಟಿ ನೇತೃತ್ವದಲ್ಲಿ ನಿರ್ಮಿಸಲಾದ ಮನೆಯನ್ನು ಪಾಣಕ್ಕಾಡ್ ಹೈದರಲಿ ತಂಙಳ್ ಹಸ್ತಾಂತರಿಸಿದರು.

ಕೊಡಿಂಞಿ ಮೊಹಲ್ಲ ಕಾರ್ಯದರ್ಶಿ ದಿವಂಗತ ಕೊಮುಕ್ಕುಟ್ಟಿ ಹಾಜಿಯ ಪತ್ನಿನೀಡಿದ ಸ್ಥಳದಲ್ಲಿ ಮನೆಯನ್ನು ನಿರ್ಮಿಸಲಾಗಿದೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಸಂದರ್ಭ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಫೈಝಲ್ ರಜೆಯಲ್ಲಿ ಊರಿಗೆ ಬಂದಿದ್ದರು. ವಿದೇಶಕ್ಕೆ ಮರಳಲಿದ್ದ ಹಿಂದಿನ ದಿನ ಬೆಳಗ್ಗೆ ಆರೆಸ್ಸೆಸ್ ಕಾರ್ಯಕರ್ತರು ಫೈಝಲ್‍ರನ್ನು ಹತ್ಯೆಗೈದಿದ್ದರು.

ಮನೆ ಹಸ್ತಾಂತರ ಸಂದರ್ಭ ಕೇರಳ ಜಮಾಅತೆ ಇಸ್ಲಾಮ್ ಉಪಾಧ್ಯಕ್ಷ ಶೇಕ್ ಮುಹಮ್ಮದ್ ಕಾರಕುನ್ನು, ಫೈಝಲ್ ಕುಟುಂಬ ಸಹಾಯ ಸಮಿತಿ ಅಧ್ಯಕ್ಷ ಪಿ.ಸಿ. ಮುಹಮ್ಮದ್ ಹಾಜಿ,ಮೊಹಲ್ಲಾ ಕಾರ್ಯದರ್ಶಿ ಪತ್ತೂರ್ ಕುಂಞಾಟ್ಟಿ ಹಾಜಿ,ಸೈಯದ್ ಶಾಹುಲ್ ಹಮೀದ್ ಜಮಾಲುಲ್ಲೈಲಿ, ಇ. ಹಂಝ, ಪಾಕ್ಕಾಟ್ ಪೊಕ್ಕು ಹಾಜಿ, ಹೈದರಲಿ ಫೈಝಿ ಕುಟ್ಟಿಪುರಂ, ಅಬ್ದುರ್ರಹ್ಮಾನ್ ಬಾಖವಿ, ನನ್ನಂಪ್ರ ಪಂಚಾಯತ್ ಅಧ್ಯಕ್ಷ ಪನಯತ್ತಿಲ್ ಮುಸ್ತಫಾ, ಪಾಲಕ್ಕಾಡ್  ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News