ಮಾವೋವಾದಿಗಳ ದಾಳಿಗೆ ಐವರು ಪೊಲೀಸರು ಬಲಿ

Update: 2018-01-25 03:52 GMT

ರಾಯಪುರ, ಜ.25: ಭದ್ರತಾ ಪಡೆಗಳ ಮೇಲೆ ಎರಡು ಕಡೆಗಳಲ್ಲಿ ದಾಳಿ ನಡೆಸಿರುವ ಮಾವೋವಾದಿ ಉಗ್ರರು ಐವರು ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ವಿಶೇಷ ಡಿಜಿಪಿ ಡಿ.ಎಂ.ಅವಸ್ತಿ ತಿಳಿಸಿದ್ದಾರೆ.

ಅಭೂಜ್‌ಮದ್ ಮತ್ತು ಬಿಜಪುರ ಎಂಬಲ್ಲಿ ಪ್ರತ್ಯೇಕ ದಾಳಿಗಳು ನಡೆದಿವೆ. ಬಿಜಪುರ ಘಟನೆಯಲ್ಲಿ ಐಇಡಿ ಸ್ಫೋಟದಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಸುಕ್ಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ ನಡೆಸೆ 37 ಮಂದಿಯನ್ನು ಹತ್ಯೆ ಮಾಡಿದ ಬಳಿಕ, ನಡೆದ ಅತಿದೊಡ್ಡ ದಾಳಿ ಇದಾಗಿದೆ.

ಘಟನೆಯಲ್ಲಿ ಇಬ್ಬರು ಪಿಎಸ್‌ಐಗಳು ಮತ್ತು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ವಿಶೇಷ ಡಿಜಿಪಿ ಡಿ.ಎಂ.ಅವಸ್ತಿ ಪ್ರಕಟಿಸಿದ್ದಾರೆ. ವಿಶೇಷ ಕಾರ್ಯಪಡೆ ತಂಡ ಮತ್ತು ಜಿಲ್ಲಾ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ನಾರಾಯಣಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಅವರು ವಿವರಿಸಿದ್ದಾರೆ.

ಮಾವೋವಾದಿಗಳ ಕೊನೆಯ ಭದ್ರ ನೆಲೆ ಎನ್ನಲಾದ ಅಬುಜ್‌ಮದ್ ಪ್ರದೇಶದಲ್ಲಿ ದಟ್ಟ ಅರಣ್ಯದೊಳಕ್ಕೆ ನುಗ್ಗಿ ಎಸ್‌ಟಿಎಫ್ ಕಾರ್ಯಾಚರಣೆ ನಡೆಸುತ್ತಿದೆ. 60 ಜವಾನರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆಗ ಮಾವೋವಾದಿಗಳ ಆರನೇ ತಂಡ ಈ ದಾಳಿ ನಡೆಸಿದೆ ಎಂದು ವಿವರ ನೀಡಿದ್ದಾರೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಆರು ಗಂಟೆಗಳಿಂದ ಗುಂಡಿನ ಚಕಮಕಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News