ಕೆ.ಪಿ.ಇಸ್ಮಾಯೀಲ್ ಉಸ್ತಾದ್ ನಿಧನ

Update: 2018-01-25 04:59 GMT

ಮಂಗಳೂರು, ಜ.25: ಹಿರಿಯ ಧಾರ್ಮಿಕ ಮುಖಂಡ, ಬೆಂಗ್ರೆ ನಿವಾಸಿ ಉಸ್ತಾದ್ ಕೆ.ಪಿ.ಇಸ್ಮಾಯೀಲ್(73) ಇಂದು ಬೆಳಗ್ಗಿನ ಜಾವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ನಗರದ ಕಸ್ಬಾ ಬೆಂಗ್ರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣಾ ಸೇವೆ ಸಲ್ಲಿಸಿದ್ದ ಕೆ.ಪಿ.ಇಸ್ಮಾಯೀಲ್ ಅವರು ಜಮಾಅತೆ ಇಸ್ಲಾಮೀ ಹಿಂದ್ ಬೆಂಗರೆ ಘಟಕದ ಸ್ಥಾಪಕ ಅಧ್ಯಕ್ಷರಾಗಿದ್ದರು. 

ಬೆಂಗರೆ ಎ.ಆರ್.ಕೆ. ಶಾಲೆಯ ಟ್ರಸ್ಟಿ ಹಾಗೂ ಸ್ಥಾಪಕ ಸದಸ್ಯರಾಗಿ ಬೆಂಗ್ರೆಯ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕೆ.ಪಿ. ಇಸ್ಮಾಯೀಲ್ ಅವರು ಅನಸ್ ಬಿನ್ ಮಾಲಿಕ್ ಜುಮಾ ಮಸೀದಿಯ ಸ್ಥಾಪನೆಯಲ್ಲಿ ವಿಶೇಷ ಪಾತ್ರ ವಹಿಸಿದ್ದರು. 

ಮೃತರು ಪತ್ನಿ, ಎಸ್.ಐ.ಓ. ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಸಹಿತ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಇಂದು(ಜ.25) ಮಗ್ರಿಬ್ ನಮಾಝ್ ನ ಬಳಿಕ ಬೆಂಗ್ರೆಯ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಸಂತಾಪ: ಕೆ.ಪಿ. ಇಸ್ಮಾಯೀಲ್ ಅವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಅತ್ಹರುಲ್ಲಾ ಶರೀಫ್, ಮಂಗಳೂರು ವಲಯ ಸಂಚಾಲಕ ಅಕ್ಬರ್ ಅಲಿ ಉಡುಪಿ, ದ.ಕ. ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ಮಂಗಳೂರು ನಗರಾಧ್ಯಕ್ಷ ಮುಹಮ್ಮದ್ ಕುಂಞಿ, ಎಸ್.ಐ.ಓ. ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ರಫೀಕ್ ಬೀದರ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ