1.5 ಲಕ್ಷದಿಂದ 5 ಲಕ್ಷ ರೂ.ಗೇರಿದ ರಾಷ್ಟ್ರಪತಿಗಳ ಮಾಸಿಕ ವೇತನ

Update: 2018-02-01 10:13 GMT

ಹೊಸದಿಲ್ಲಿ, ಫೆ.1: 2018ರ ಕೇಂದ್ರ ಬಜೆಟ್ ಮಂಡನೆಯ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ರಾಷ್ಟ್ರಪತಿಯವರ ಮಾಸಿಕ ವೇತನ 5 ಲಕ್ಷ ರೂ.ಗೇರಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಹಿಂದೆ ರಾಷ್ಟ್ರಪತಿಯವರ ವೇತನ 1.5 ಲಕ್ಷ ರೂ. ಆಗಿದ್ದು, 200 ಶೇ.ದಷ್ಟು ಹೆಚ್ಚಳ ಎನ್ನಲಾಗಿದೆ.

ಉಪರಾಷ್ಟ್ರಪತಿಯವರ ವೇತನವನ್ನು 1.10 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದೇ ರೀತಿ ರಾಜ್ಯಪಾಲರ ವೇತನವನ್ನು 3.5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಬಜೆಟ್ ಅಧಿವೇಶನದಲ್ಲಿ ಈ ನಿರ್ಧಾರಕ್ಕೆ ಒಪ್ಪಿಗೆ ಸಿಕ್ಕಿದರೆ 2016 ಫೆಬ್ರವರಿಯಿಂದ ಈ ವೇತನವು ಅನ್ವಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News